ಮಂತ್ರಾಲಯ ಶ್ರೀಮಠ : ಸಿಬ್ಬಂದಿಯ ಪ್ರಾಮಾಣಿಕತೆ ಪ್ರಶಂಸೆ

ರಾಯಚೂರು.ಜು.೨೦- ಮಂತ್ರಾಲಯದ ರಾಯರ ಸನ್ನಿಧಿಯಲ್ಲಿ ಯಾವುದೇ ಆಮಿಷವಿಲ್ಲದೆ, ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳ ಪ್ರಾಮಾಣಿಕತೆಗೆ ಈ ಘಟನೆ ನಿದರ್ಶನವಾಗಿದೆ.
ಅಮಲಾಪೂರು ಗ್ರಾಮದ ಕೇಶವ ಪಟ್ನಂ ನರಸಿಂಹರಾವ್ ಇವರು ಡಿವಿಜಿ ರೂಮ್ ನಂ.೪೬ ರಲ್ಲಿ ಅವರ ಸ್ನೇಹಿತರಾದ ಗೊಲ್ಲನರಸರಾಜು ಅವರೊಂದಿಗೆ ವಾಸ್ತವ್ಯ ಹೂಡಿದ್ದರು. ಅವರು ಈ ರೂಮ್‌ನಲ್ಲಿ ನವರತ್ನ ಚಿನ್ನದ ಉಂಗುರ ಹಾಗೂ ಮತ್ತೊಂದು ಬೆಳ್ಳಿಯ ಉಂಗುರಗಳನ್ನು ಮರೆತು ಹೋಗಿದ್ದರು. ಸಂಜೆ ೫ ಘಂಟೆಗೆ ಸ್ವಚ್ಛತೆ ಸಂದರ್ಭದಲ್ಲಿ ಗೋವಿಂದಮ್ಮ ಎನ್ನುವ ಕೋಣೆ ನಿರ್ವಹಣೆ ಮಹಿಳೆಗೆ ಈ ಉಂಗುರಗಳು ಸಿಕ್ಕಿವೆ. ಈ ಬಗ್ಗೆ ಈ ಕುರಿತು ತಕ್ಷಣವೆ ಮೇಲುಸ್ತುವಾರಿ ವಹಿಸಿದ ರಾಮು ಅವರ ಗಮನಕ್ಕೆ ತರಲಾಗಿತ್ತು.
ಈ ಎಲ್ಲಾ ವಸ್ತುಗಳನ್ನು ಮಂತ್ರಾಲಯ ಮಠದ ವ್ಯವಸ್ಥಾಪಕರಿಗೆ ಒಪ್ಪಿಸಲಾಗಿತ್ತು. ರೂಮ್ ನಂ.೪೬ ರಲ್ಲಿ ಯಾರು ವಾಸ್ತವ್ಯ ಹೂಡಿದ್ದರು ಎನ್ನುವುದನ್ನು ಕೂಲಂಕುಷವಾಗಿ ಪರಿಶೀಲಿಸಿ, ಅವರನ್ನು ಕರೆದು, ಚಿನ್ನ ಮತ್ತು ಬೆಳ್ಳಿಯ ಎರಡು ಉಂಗುರಗಳು ಅವರದ್ದೆ ಎಂದು ಖಚಿತ ಪಡಿಸಿಕೊಂಡು ಮರಳಿಸಲಾಗಿದೆ. ಅಲ್ಲದೆ, ಕೋಣೆ ನಿರ್ವಹಣಾ ಮಹಿಳೆ ಮತ್ತು ಸಿಬ್ಬಂದಿಯ ಪ್ರಾಮಾಣಿಕತೆ ಬಗ್ಗೆ ಶ್ರೀಮಠದ ವ್ಯವಸ್ಥಾಪಕರಾದ ಎಸ್.ಕೆ.ಶ್ರೀನಿವಾಸ ರಾವ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.