ಮಂತ್ರಾಲಯ : ವಿಜಯದಶಮಿ ಆಚರಣೆ

ಮಾನ್ವಿ.ಅ.26- ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀ ಸುಭುಧೇಂದ್ರ ತೀರ್ಥರ ಆಜ್ಞೆಯಂತೆ ಮಾನ್ವಿ ಶ್ರೀ ಮಠದಲ್ಲಿ ಅತ್ಯಂತ ಸರಳವಾಗಿ ವಿಜಯ ದಶಮಿ ಆಚರಿಸಲಾಯಿತು.
ಬೆಳಿಗ್ಗೆ ರಾಯರ ವೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರ, ಪಂಚಾಮೃತ ಅಭಿಷೇಕ, ಸಂಜೆ ಶಮೀ ಪೂಜೆ ನೆರವೇರಿಸಲಾಯಿತು. ವಿಜಯದಶಮಿ ಕರೊನ ಹಾಗೂ ನೆರೆ ಹಾವಳಿಯನ್ನು ಕಡಿಮೆ ಮಾಡಿ ನಾಡಿನ ಜನತೆಯ ಜೀವನವನ್ನು ಸಮೃದ್ಧಿ ಗೊಳಿಸಲು ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿಚಾರಣಾ ಕರ್ತ ಮುದ್ದು ರಂಗ ರಾವ್ ಮುತಾಲಿಕ್, ವ್ಯವಸ್ಥಾಪಕ ರಾಘವೇಂದ್ರ ರಾವ್ ದೇಸಾಯಿ ಕೊಪ್ಪಳ, ಅರ್ಚಕ ರವಿ ಆಚಾರ್, ಸಿಬ್ಬಂದಿ ಗಳಾದ ಚಂದ್ರಶೇಖರ್, ರಾಘವೇಂದ್ರ ಆಚಾರ್ ಇಬಾರಾಮ ಪುರ, ಸಮಾಜದ ಸಕಲ ವರ್ಗದ ಭಕ್ತಾದಿಗಳು ಭಾಗವಹಿಸಿದ್ದರು.