ಮಂತ್ರಾಲಯ : ಲಕ್ಷ ಪುಷ್ಪಾರ್ಚನೆ

ರಾಯಚೂರು.ನ.೧೩- ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇಂದು ಲಕ್ಷ ಪುಷ್ಪಾರ್ಚನ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.
ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಲಕ್ಷ ಪುಷ್ಪಾರ್ಚನೆ ಕೈಂಕರ್ಯ ನೆರವೇರಿಸಿದರು. ಶ್ರೀ ಬ್ರಹ್ಮ ಕರಾಚಿತ ಶ್ರೀ ಮೂಲ ರಾಮದೇವರು ಮತ್ತು ಇತರೆ ಪೀಠಾಧಿಪತಿಗಳ ಬೃಂದಾವನಗಳಿಗೆ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಬಗೆ ಬಗೆಯ ಹೂವುಗಳಿಂದ ಈ ಪೂಜಾ ಕಾರ್ಯಕ್ರಮಕ್ಕೆ ಭಾರೀ ಪ್ರಮಾಣದ ಭಕ್ತರು ದರ್ಶನ ಪಡೆದರು. ಶ್ರೀ ಮಠದಲ್ಲಿ ಇಂದು ಲಕ್ಷ ಪುಷ್ಪಗಳ ಅಲಂಕಾರ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಲಾಯಿತು.