ಮಂತ್ರಾಲಯ : ತುಂಗಾರತಿ – ತೆಪ್ಪೋತ್ಸವ

ರಾಯಚೂರು.ನ.೦೭- ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೀಠಾಧಿಪತಿಗಳಾದ ಶ್ರಿ ಸುಬುಧೇಂದ್ರ ತೀರ್ಥರ ಸಾನಿಧ್ಯದಲ್ಲಿ ತುಂಗಾನದಿ ದಂಡೆಯಲ್ಲಿ ತುಂಗಾರತಿ, ತೆಪ್ಪೋತ್ಸವ ನಡೆಸಲಾಯಿತು.
ಶ್ರೀಗಳು ಉತ್ಸವ ಮೂರ್ತಿ, ಪ್ರಹ್ಲಾದ ರಾಜರ ಪಲ್ಲಕ್ಕಿಯೊಂದಿಗೆ ತುಂಗಾನದಿಯ ದಡಕ್ಕೆ ಆಗಮಿಸಿ, ನದಿಗೆ ಪೂಜೆ ನೆರವೇರಿಸಿ, ತುಂಗಾರತಿ ನೆರವೇರಿಸಿದರು. ನಂತರ ಅರ್ಚಕರು ನದಿಗೆ ಆರತಿ ಮಾಡಿದರು. ಮಂಗಳವಾರ ಕಾರ್ತಿಕ ಹುಣ್ಣೆಮೆಯಂದು ಚಂದ್ರಗ್ರಹಣ ಇರುವುದರಿಂದ ತ್ರಯೋದಶಿ ದಿನವಾದ ರವಿವಾರವೇ ತುಂಗಾರತಿ ನೆರವೇರಿಸಲಾಯಿತು. ನಂತರ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳ ನೇತೃತ್ವದಲ್ಲಿ ಉತ್ಸವ ಮೂರ್ತಿಯೊಂದಿಗೆ ತೆಪ್ಪೋತ್ಸವ ನಡೆಯಿತು. ವನಭೋಜನಾ : ನಿನ್ನೆ ಬೆಳಿಗ್ಗೆ ಅಭಯ ಆಂಜಿನೇಯ್ಯ ಸ್ವಾಮಿ ಸನ್ನಿಧಾನದಲ್ಲಿ ವನಭೋಜನಾ ನಡೆಸಲಾಯಿತು. ಮೊದಲು ಶ್ರೀ ಸುಬುಧೇಂದ್ರ ತೀರ್ಥರು ಬ್ರಹ್ಮಕರಾರ್ಚಿತ ಮೂಲ ರಾಮದೇವರ ಪೂಜೆ ನೆರವೇರಿಸಿದರು. ನಂತರ ಅಭಯ ಆಂಜಿನೇಯ್ಯ ದೇವರಿಗೆ ಪೂಜೆ ಸಲ್ಲಿಸಲಾಯಿತು.
ಶ್ರೀಮಠದ ಭಕ್ತರು, ಸಿಬ್ಬಂದಿ, ಸ್ಥಳೀಯರು ವನಭೋಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.