
ರಾಯಚೂರು,ಸೆ.೨- ನಗರದಿಂದ ಮಂತ್ರಾಲಯಕ್ಕೆ ಹೊರಟಿದ್ದ ಸಾರಿಗೆ ಬಸ್‌ನಲ್ಲಿ ಇದ್ದಕ್ಕಿದ್ದಂತೆ ಹೊಗೆ ಆವರಿಸಿ ಪ್ರಯಾಣಿಕರು ಆತಂಕಕ್ಕೆ ಒಳಗಾದ ಘಟನೆ ಆಂಧ್ರಪ್ರದೇಶದ ಮಾಧಾವರಂ ಬಳಿ ನಡೆದಿದೆ.
ರಾಯರ ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಬಹುತೇಕ ಪ್ರಯಾಣಿಕರು ಮಂತ್ರಾಲಯಕ್ಕೆ ಹೊರಟಿದ್ದರು. ಈ ವೇಳೆ ಮಾಧಾವರಂ ಬಳಿ ಮಾರ್ಗ ಮಧ್ಯೆ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ನಿಂದ ದಟ್ಟ ಹೊಗೆ ಆವರಿಸಿದೆ. ಇದರಿಂದ ಪ್ರಯಾಣಿಕರು ಗಾಬರಿಗೊಳಗಾಗಿದ್ದಾರೆ. ಬಳಿಕ ಸಮೀಪದ ಮನೆಯೊಂದರಿಂದ ನೀರನ್ನು ತಂದು ರೇಡಿಯೇಟರ್‌ಗೆ ಸುರಿದ ಬಳಿಕ ಹೊಗೆ ನಿಯಂತ್ರಣಕ್ಕೆ ಬಂದಿದೆ.
ಘಟನೆಗೆ ಕಾರಣ ತಿಳಿದು ಬಂದಿಲ್ಲ. ಆದರೆ ಪ್ರಯಾಣಿಕರು, ಹಳೆಯದಾದ ಬಸ್‌ಗಳ ಅಸಮರ್ಪಕ ನಿರ್ವಹಣೆಯಿಂದ ಘಟನೆ ನಡೆದಿದೆ. ಕೂಡಲೇ ಹಳೆ ಬಸ್‌ಗಳನ್ನ ಬದಲಿಸಬೇಕು. ಬಸ್‌ಗಳ ನಿರ್ವಹಣೆ ಸರಿಯಾಗಿ ಮಾಡಬೇಕು ಎಂದು ದೂರಿದ್ದಾರೆ.
ಘಟನೆಯಿಂದ ಯಾರಿಗೂ ತೊಂದರೆಯಾಗಿಲ್ಲ. ಚಾಲಕ ತಕ್ಷಣ ನೀರು ತಂದು ಹಾಕಿರುವುದರಿಂದ ಅನಾಹುತ ತಪ್ಪಿದೆ. ಚಾಲಕನ ಸಮಯ ಪ್ರಜ್ಞೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.