
ರಾಯಚೂರು(ಮಂತ್ರಾಲಯ),ಆ.೧೬- ರಾಯರ ಸನ್ನಿಧಿ ಮಂತ್ರಾಲಯದಲ್ಲಿ ಆಗಸ್ಟ್ ೨೯ ರಿಂದ ಸೆಪ್ಟೆಂಬರ್ ೪ರವರೆಗೆ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರು ಅವರ ೩೫೨ನೇ ಆರಾಧನಾ ಮಹೋತ್ಸವ ಜರುಗಲಿದೆ.
ಕಾರ್ಯಕ್ರಮದ ಅಂಗವಾಗಿ ಸಪ್ತ ರಥೋತ್ಸವ ಕಾರ್ಯಕ್ರಮ ಮಂತ್ರಾಲಯ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರ ನೇತೃತ್ವದಲ್ಲಿ ನಡೆಯಲಿದೆ. ದಿನಾಂಕ ೨೯ರಿಂದ ಆರಾಧನಾ ಮಹೋತ್ಸವ ಅಂಗವಾಗಿ ಪ್ರತಿದಿನ ಸಂಜೆ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಂತ್ರಾಲಯ ಪೀಠಾಧಿಪತಿಗಳಾದ ಸುಭುದೇಂದ್ರ ತೀರ್ಥ ಶ್ರೀಗಳು ಮಠದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದ ನೇತೃತ್ವವನ್ನು ಪೀಠಾಧಿಪತಿ ಸುಭುದೇಂದ್ರ ತೀರ್ಥ ಸ್ವಾಮೀಜಿ ವಹಿಸಲಿದ್ದು, ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟಿಸ್ ಅಬ್ದುಲ್ ನಜೀರ್ ಉಪಸ್ಥಿತತಿರುವವರು ಉಳಿದಂತೆ ವಿದ್ವಾನ್ ರಾಮ ವಿಠ್ಠಲ ಚಾರ್ಯ, ವಿದ್ವಾನ್ ಗರಿಕಿಪತಿ ನರಸಿಂಹರಾವ್, ಎನ್. ಚಂದ್ರಶೇಖರನ್ ಹಾಗೂ ಎಂ.ಐ.ಟಿ ಸಂಸ್ಥಾಪಕ ಡಾ.ವಿಶ್ವನಾಥ್ ಡಿ. ಕಾರತ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸೆಪ್ಟೆಂಬರ್ ೧ ರ ಬೆಳಿಗ್ಗೆ ೭:೩೦ ರ ರಾಯರ ಮಧ್ಯರಾಧನೆ ಕಾರ್ಯಕ್ರಮ ಜರುಗಲಿದೆ.
ಆರಾಧನಾ ಸಪ್ತ ರಥೋತ್ಸವ ಅಂಗವಾಗಿ ಧ್ವಜಾರೋಹಣ ಪ್ರಾರ್ಥನೋತ್ಸವ, ಪ್ರಭಾ ಉತ್ರವ, ಧನ್ಯೋತ್ಸವ, ಋಗ್ವೇದ ನಿತ್ಯ ನೂತನ ಉಪಕರ್ಮ ನಡೆಯಲಿದೆ. ಆಗಸ್ಟ್ ೩೦ ರಂದು ಶಾಖೋತ್ಸವ ರಜತ ಮಂಟಪೋತ್ಸವ, ಯಜುರ್ವೇದ ನಿತ್ಯ ನೂತನ ಉಪಕರ್ಮ, ಆಗಸ್ಟ್ ೩೧ ರಂದು ಪೂರ್ವಾ ಆರಾಧನಾ ರಜತ ಸಿಂಹ ವನೋತ್ಸವ, ಸೆಪ್ಟೆಂಬರ್ ೧ ರಂದು ಮಧ್ಯಾರಾಧನಾ ಮಹಾ ಪಂಚಾಮೃತ ಅಭಿಷೇಕ ಗಜರಾಜತ ಸ್ವರ್ಣ ರಥೋತ್ಸವ, ಸೆಪ್ಟೆಂಬರ್ ೨ ರಂದು ಉತ್ತರ ಆರಾಧನಾ ಪ್ರಾತಃ ಮಹಾರಥೋತ್ಸವ ಕಾರ್ಯಕ್ರಮ, ಸೆಪ್ಟೆಂಬರ್ ೩ ರಂದು ಶ್ರೀ ಸುಜ್ಞಾನೇಂದ್ರ ತೀರ್ಥ ಆರಾಧಾನ ಮಹೋತ್ಸವ, ಅಶ್ವ ವನೋತ್ಸವ ಹಾಗೂ ೪ ರಂದು ಸರ್ವ ಸಮಾರೋಪನೋತ್ಸವ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ದಿನಾಂಕ ೨೯ ರಂದು ಧ್ವಜಾರೋಹಣ, ವಿದ್ವಾನ್ ಒಲಗುಂಡಿ ಗುಂಡಾಚಾರ್ ಅವರಿಂದ ದಾಸವಾಣಿ, ಸಾಹಿಲ್ ನೃತ್ಯ ಶಿಕ್ಷಣಾಲಯ ಆನಂತಪುರ ವಿದ್ಯಾರ್ಥಿಗಳಿಂದ ಕುಚಿಪುಡಿ ನೃತ್ಯ, ೩೦ ರಂದು ಶಾಖೋತ್ಸವ, ಡಾ|| ಎಚ್.ಎಸ್ ಅನೂಸೂಯ ಕುಲಕರ್ಣಿ ಬೆಂಗಳೂರು ಇವರಿಂದ ಅಂಗಾಕುಲಂಗ್ ಕಾರ್ಯಕ್ರಮ, ವಿದ್ವಾನ ಆರ್.ಕೆ ಪ್ರಸನ್ನ ಕುಮಾರ್ ಅವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ, ಕಲಾ ಬಿಂದು ಅವರಿಂದ ಭರತನಾಟ್ಯ, ಆಗಸ್ಟ್ ೩೧ ರಂದು ಪೂರ್ವ ಆರಾಧನಾ, ವಿದ್ವಾನ್ ಬಾಲಚಂದ್ರ ನಾಕೋಡ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ, ಅಲ್ಕಾದೇಶಪಾಂಡೆ ಉಪಸನಾ ಅವರಿಂದ ಭರತನಾಟ್ಯ, ಸೆಪ್ಟೆಂಬರ್ ೧ ರಂದು ಮಧ್ಯ ಆರಾಧನಾ, ಶೋಭನಾ ಸ್ವಾಮಿನಾಥನ್ ಅವರಿಂದ ಪಂಚವೀಣಾ ಸಂಗೀತಾ ಕಾರ್ಯಕ್ರಮ, ವಿದ್ವಾನ್ ರಾಯಚೂರು ಶೇಷಗಿರಿ ದಾಸ್ ಅವರಿಂದ ದಾಸವಾಣಿ, ಓಂಕಾರ್ ನೃತ್ಯ ಸಾಧನ ಅವರಿಂದ ನೃತ್ಯ ರೂಪಕ, ಸೆಪ್ಟೆಂಬರ್ ೨ ರಂದು ಉತ್ತರ ಆರಾಧನಾ ಮಹೋತ್ಸವ, ಡಾ.ರಕ್ಷಾ ಕಾರ್ತಿಕ್ ಅವರಿಂದ ಭರತನಾಟ್ಯ, ಡಾ.ನೀಲಂ ಸುದರ್ಶನ್ ಅವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ, ಪ್ರಭಾತ್ ಕಲಾ ಆರ್ಟ್ಸ್‌ನಿಂದ ನೃತ್ಯ ರೂಪಕ, ಸೆಪ್ಟೆಂಬರ್ ೩ ರಂದು ಅಶ್ವ ವಾಹನ ಉತ್ಸವ, ನಾಟ್ಯ ಸರಸ್ವತಿ ಅವರಿಂದ ಕುಚುಪುಡಿ ನೃತ್ಯ, ವಿದ್ವಾನ ಜಗದೀಶ್ ಆಚಾರ್ಯರಿಂದ ದಾಸವಾಣಿ, ಶ್ರೀ ಶಾರದಾ ಅವರಿಂದ ಭರತನಾಟ್ಯ, ಸೆಪ್ಟೆಂಬರ್ ೪ ರಂದು ಸರ್ವಸಮರೋಪಣ ಜರುಗಲಿದ್ದು, ಶಿವ ಆಕಾಡೆಮಿಯಿಂದ ಭರತನಾಟ್ಯ, ವಿದೂಷಿ ಹೆಚ್.ಜೆ ಅಂಗ್ಹಾ ಅವರಿಂದ ದಾಸವಾಣಿ, ಅಮೃತವರ್ಷಿಣಿ ಭಜನಾ ಮಂಡಳಿಯಿಂದ ಭಕ್ತಿ ಗೀತೆಗಳ ಕಾರ್ಯಕ್ರಮ ನಡೆಯಲಿದೆ.
ಆರಾಧನಾ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಸಹ ಆಹ್ವಾನಿಸಲಾಗಿದೆ. ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲೇ ಏಮ್ಸ್ ಆರಂಭವಾಗಬೇಕು ಇದರಿಂದ ಈ ಭಾಗದ ಬಡವರ್ಗದ ಜನತೆಗೆ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆ ದೊರೆಯಲಿದೆ. ಶ್ರೀಮಠ ಮಂತ್ರಾಲಯದಿಂದಲೂ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗುವುದು. ೩ ದಿನಗಳ ಕಾಲ ಮಂತ್ರಾಲಯದಲ್ಲಿ ಆರಾಧನಾ ಮಹೋತ್ಸವ ಜರುಗಲಿದೆ. ತುಂಗಾನದಿಯಲ್ಲಿ ನೀರಿನ ಹರಿವು ಕಡಿಮೆ ಇರುವ ಹಿನ್ನೆಲೆ, ನೀರು ಬಿಡಲು ನೀರಾವರಿ ಅಧಿಕಾರಿಗಳಿಗೂ ಮಠದ ವತಿಯಿಂದ ಮನವಿ ಸಲ್ಲಿಸಲಾಗುವುದು.
ಸುಭುದೇಂದ್ರ ತೀರ್ಥ ಶ್ರೀಗಳು, ಪೀಠಾಧಿಪತಿ, ಶ್ರೀಮಠ ಮಂತ್ರಾಲಯ.