ಮಂಡ್ಯ ವಿದ್ಯಾರ್ಥಿ ನಿಲಯ ಕಟ್ಟಡದ ಮೇಲೆ ಕಲ್ಲು ತೂರಾಟ ಖಂಡನೆ

ಬೀದರ:ಜ.31:ಜ.29. ರಂದು ಮಂಡ್ಯ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿರವರ ಹಾಗೂ ಮಾಜಿ ಸಚಿವ ಶ್ರೀ ಸಿ.ಟಿ. ರವಿರವರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಕೆರಗೊಡ ಗ್ರಾಮದಲ್ಲಿ ನಡೆದ ಹನುಮ ಧ್ವಜದ ವಿವಾದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರನ್ನು ಪ್ರಚೋದನೆಗೊಳಿಸಿ, ಮಂಡ್ಯ ನಗರದ ಬೆಂಗಳೂರು-ಮೈಸೂರು-ರಸ್ತೆಯಲ್ಲಿರುವ ಮಂಡ್ಯ ಜಿಲ್ಲಾ ಕುರುಬರ ಸಂಘದ ವಿದ್ಯಾರ್ಥಿ ನಿಲಯದ ಕಟ್ಟಡದ ಮೇಲೆ ಕಲ್ಲು ತೂರಾಟ ಮಾಡಿಸಿ, ಕಟ್ಟಡದ ಕಿಟಕಿ ಗಾಜುಗಳನ್ನು ಧ್ವಂಸಗೊಳಿಸುವಂತೆ ಮಾಡಿರುತ್ತಾರೆ. ಅಲ್ಲದೆ ವಿದ್ಯಾರ್ಥಿ ನಿಲಯದಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚುವ ಹುನ್ನಾರ ಕೂಡ ಪ್ರತಿಭಟನಾಕಾರರು ಮಾಡಿದ್ದರೆಂದು ಅಷ್ಟರಲ್ಲಿ ಪೆÇಲೀಸರು ಮಧ್ಯ ಪ್ರವೇಶಿಸಿ ಅನಾಹುತ ತಡೆದಿದ್ದಾರೆಂಬುದಾಗಿ ತಿಳಿದು ಬಂದಿರುತ್ತದೆ.
ಅಲ್ಲದೆ ಮಂಡ್ಯದ ಈ ನೀಚ ಕೃತ್ಯದಲ್ಲಿ ತೊಡಗಿರುವವರಿಗೆ ಹಾಗೂ ಪ್ರಚೋದನೆ ನೀಡಿ ಹಿಂದೆ ಉಳಿದುಕೊಳ್ಳುವ ಶಕುನಿಯಂತವರಿಗೆ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು ಸೂಕ್ತ ರೀತಿಯಲ್ಲಿ ಕ್ರಮ ಕೈಕೊಳ್ಳಬೇಕೆಂದು ಬೀದರ ಗೊಂಡ ಪರ ಸಂಘಟನೆಗಳ ಒಕ್ಕೂಟದಿಂದ ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂವಿದಾನ ಸಂರಕ್ಷಣ ಸಮಿತಿಯ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ, ಗೊಂಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ತುಕಾರಾಮ ಕರಾಟೆ, ಗೋವರ್ಧನ ರಾಠೋಡ, ಖುಶಾಲ ಹಾಸಗೊಂಡ, ಸಂತೋಷ ಜೋಳದಾಬಪಕೆ, ಶಿವಕುಮಾರ ನೀಲಿಕಟ್ಟಿ, ಖುಶಾಲ ಹಾಸಗೊಂಡ, ಲೋಕೇಶ ಮರ್ಜಾಪೂರ, ರಾಜಕುಮಾರ ಚಿಟ್ಟಾವಾಡಿ, ಅಮರ್ ಕೊಳಾರ, ಈಶ್ವರ ಕನೇರಿ, ಪ್ರದೀಪ ನಾಟೇಕರ್, ಸಂದೀಪ ಕಾಂಟೆ, ನರಸಪ್ಪಾ ಯಾಕತಪೂರ,ಪಿ.ಎಸ್. ಇಟಕಂಪಳ್ಳಿ, ಅಶೋಕ ಮದಾಳೆ,ರಘುನಾತ ಬುರೆ,ಶರಣು ಟೊಳ್ಳೆ,ಅಮೃತ ಮುತ್ತಂಗಿಕರ್,ಎಂ.ಪಿ. ವೈಜಿನಾಥ,ರಾಕೇಶ ಕುರಬಖೇಳ್ಗಿ,ರಿಯಾಜೋದ್ದಿನ ಚಿದ್ರಿ,ಒಂಕಾರ ಗಾದಗಿ,ಸಿದ್ದು ಗಾದಗಿ,ಆನಂದ,ಕಲ್ಲಪ್ಪಾ ಇದ್ದರು.