ಮಂಡ್ಯ ಬಳಿಕ ಚಾಮರಾಜನಗರ ಬಂದ್ ಎಚ್ಚರಿಕೆ ಕೊಟ್ಟ ರೈತರು!!

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.24:- ಕಾವೇರಿ ನೀರಿನ ಸಂಬಂಧ ಹಳೇ ಮೈಸೂರು ಭಾಗದಲ್ಲಿ ಹೋರಾಟದ ಕಿಚ್ಚು ಜೋರಾಗಿದ್ದು ರೈತರು, ಕನ್ನಡಪರ ಸಂಘಟನೆಗಳು ಜಿಲ್ಲೆಯಲ್ಲಿ ಸರಣಿ ಪ್ರತಿಭಟನೆ ನಡೆಸುತ್ತಿವೆ.
ಶನಿವಾರ ಮಧ್ಯಾಹ್ನ ಚಾಮರಾಜನಗರ-ಕೊಳ್ಳೆಗಾಲ ಹೆದ್ದಾರಿತಡೆದರೈತ ಸಂಘಟನೆಯಕಾರ್ಯಕರ್ತರು ತಮಿಳುನಾಡು, ಕರ್ನಾಟಕ ಹಾಗೂ ಕಾವೇರಿ ನ್ಯಾಯಾಧೀಕರಣದ ವಿರುದ್ಧಆಕ್ರೋಶ ಹೊರಹಾಕಿದರು.
ಕಾವೇರಿ ನೀರಿನ ಸಂಬಂಧ ಮಂಡ್ಯ ಬಂದ್ ಮಾಡಲಾಗಿದ್ದು ಅದರಂತೆ ಚಾಮರಾಜನಗರವನ್ನು ಕೂಡ ಬಂದ್ ಮಾಡುತ್ತೇವೆ. ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರನ್ನು ನಿಲ್ಲಿಸದೇ ಇದ್ದರೇ ಕನ್ನಡ ಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಜೊತೆ ಸಭೆ ಸೇರಿ ಚಾಮರಾಜನಗರ ಬಂದ್ ಮಾಡಲಾಗುತ್ತದೆ ಎಂದು ರೈತ ಮುಖಂಡ ಹೆಬ್ಬಸೂರು ಬಸವಣ್ಣ ಎಚ್ಚರಿಕೆ ಕೊಟ್ಟಿದ್ದಾರೆ.
ರಾಜ್ಯಸಭಾ ಸದಸ್ಯರ, ಫೆÇೀಟೋಗೆ ಬೆಂಕಿ ಹೊತ್ತಿಸಿ ರೈತರ ಆಕ್ರೋಶ!:
ಕಾವೇರಿ ಸಂಕಷ್ಟದ ಸಮಯದಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಮೌನವಾಗಿದ್ದಾರೆಂದು ಆರೋಪಿಸಿ ಚಾಮರಾಜನಗರದಲ್ಲಿ ಕಬ್ಬು ಬೆಳೆಗಾರರು ಫೆÇೀಟೋಗಳನ್ನು ಸುಟ್ಟು ಆಕ್ರೋಶ ಹೊರಹಾಕಿದರು.
ಚಾಮರಾಜನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಭುವನೇಶ್ವರಿ ವೃತ್ತದಲ್ಲಿ ಸಂಸದರಾದ ಜಗ್ಗೇಶ್, ರಾಜೀವ್ ಚಂದ್ರಶೇಖರ್, ನಿರ್ಮಲಾ ಸೀತಾರಾಮನ್ ಹಾಗೂ ತಮಿಳುನಾಡು ಸಿಎಂ ಸ್ಟಾಲಿನ್ ಭಾವಚಿತ್ರಗಳನ್ನು ಸುಟ್ಟು ಧಿಕ್ಕಾರದ ಘೋಷಣೆ ಕೂಗಿದರು.
ರಾಜ್ಯದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯರುಗಳು ಕಾವೇರಿ, ಕಬಿನಿ ವಿಚಾರದಲ್ಲಿ ಚಕಾರವನ್ನು ಎತ್ತದೆ ಮೌನವಾಗಿದ್ದಾರೆ, ರಾಜ್ಯ ಕೋಟಾದಡಿ ರಾಜ್ಯಸಭಾ ಸದಸ್ಯರಾಗಿದ್ದರೂ ಮೌನವಹಿಸಿರುವುದು ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕದಿಂದ ಆಯ್ಕೆಯಾಗಿರುವ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು, ಯಾವ ರಾಜ್ಯದ ಪರವಾಗಿದ್ದಾರೋ ಅಲ್ಲಿಗೆ ತೆರಳಿ ಆಯ್ಕೆಯಾಗಲಿ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಇನ್ನು, ರಸ್ತೆತಡೆ ನಡೆಸಿದ್ದರಿಂದ ಅರ್ಧ ತಾಸಿಗೂ ಅಧಿಕ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.