ಮಂಡ್ಯದಲ್ಲಿ ಆಕ್ಸಿಜೆನ್ ಕೊರತೆ ಬಿಚ್ಚಿಟ್ಟ ಜಿಲ್ಲಾ ಉಸ್ತುವಾರಿ ಸಚಿವ

ಮಂಡ್ಯ : ಪ್ರಸ್ತುತ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿರುವ ಆಕ್ಸಿಜೆನ್ ದಾಸ್ತಾನು ಇಂದು ರಾತ್ರಿವರೆಗೆ ಆಗುತ್ತೆಘಿ. ನಾಳೆ ಬೆಳಗ್ಗೆಯಿಂದ ಆಕ್ಸಿಜೆನ್‌ಗೆ ಕೊರತೆ ಉಂಟಾಗಲಿದೆ ಎಂದು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಆತಂಕ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆಯ ಸ್ಥಿತಿ ನಮಗೆ ಬರುವುದು ಬೇಡ ಎಂಬ ನಿಟ್ಟಿನಲ್ಲಿ ನಾನೇ ಖುದ್ದು ಮೈಸೂರಿನ ಆಕ್ಸಿಜೆನ್ ಕಂಪನಿಗೆ ತೆರಳುತ್ತಿದ್ದೇನೆ. ಎಷ್ಟು ಸಾಧ್ಯವೋ ಅಷ್ಟ ಪ್ರಮಾಣದ ಆಕ್ಸಿಜೆನ್ ಸರಬರಾಜು ಮಾಡಲು ಕೋರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಆಕ್ಸಿಜೆನ್ ಕೊರತೆ ಇದೆ ಎಂದು ಕೈ ಕಟ್ಟಿ ಕುಳಿತರೆ ಏನೂ ಮಾಡಲು ಸಾಧ್ಯವಿಲ್ಲಘಿ. ಈ ಹಿನ್ನಲೆಯಲ್ಲಿ ನಾನೇ ಮೈಸೂರಿಗೆ ತೆರಳಿ ಆಕ್ಸಿಜೆನ್ ಸರಬರಾಜಾಗುವಂತೆ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದರು.