ಮಂಡೆಕೋಲು ದೇವಸ್ಥಾನಕ್ಕೆ ಎಡನೀರು ಸ್ವಾಮೀಜಿ ಭೇಟಿ

ಸುಳ್ಯ, ನ.೧೮- ಮಂಡೆಕೋಲು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಎಡನೀರು ಮಠದ ನೂತನ ಸ್ವಾಮಿಜಿ ಸಚ್ಚಿದಾನಂದ ತೀರ್ಥರವರು ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ದೇವಾಲಯದ ಸಮಿತಿ ವತಿಯಿಂದ ಶ್ರೀಗಳ ಪಾದ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಕುಂಟಾರು ರವೀಶ ತಂತ್ರಿ, ದೇವಾಲಯದ ಆಡಳಿತಾಧಿಕಾರಿಗಳಾದ ಆಲೆಟ್ಟಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೀರ್ತಿ ಪ್ರಸಾದ್, ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸದಾನಂದ ಮಾವಜಿ, ಮೇದಪ್ಪ ಗೌಡ ಬೊಳುಗಲ್ಲು, ಶಿವಪ್ರಸಾದ ಕಣೆಮರಡ್ಕ, ಕೇಶವಮೂರ್ತಿ ಹೆಬ್ಬಾರ್, ಕುಸುಮಾಧರ ಮಾವಜಿ, ಅನಂತಕೃಷ್ಣ ಭಟ್, ಕೃಷ್ಣ ಮೂರ್ತಿ ಹೆಬ್ಬಾರ್, ರಾಮಮೂರ್ತಿ ಹೆಬ್ಬಾರ್, ನಾರಾಯಣ ಮೂರ್ತಿ ಹೆಬ್ಬಾರ್, ರಾಮ ಕಡಂಬಳಿತ್ತಾಯ, ಈಶ್ವರಚಂದ್ರ ಭಟ್, ಸುರೇಶ್ ಕಣೆಮರಡ್ಕ, ಸಂಧ್ಯಾ ಮಂಡೆಕೋಲು, ಪೂರ್ಣಚಂದ್ರ ಕಣೆಮರಡ್ಕ, ಮಹೇಶ್ ಯು.ಯಂ. ಚಂದ್ರಜಿತ್ ಮಾವಂಜಿ, ಸುಬ್ಬಣ್ಣ ಗೌಡ ಮೇಲ್ಮನೆ ಹಾಗೂ ಊರಿನ ಮತ್ತು ಪರ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.