ಮಂಡೆಕೋಲು ಕೃಷಿ ತೋಟಗಳಿಗೆ ಕಾಡಾನೆ ದಾಳಿ

ಳ್ಯ, ಎ.೨೧- ಮಂಡೆಕೊಲು ಗ್ರಾಮದ ಮುರೂರು ಸುತ್ತಮುತ್ತಲಿನ ರೈತರ ಕೃಷಿ ತೋಟಗಳಿಗೆ ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ಕಾಡಾನೆಗಳು ಹಿಂಡು ದಾಳಿ ನಡೆಸಿದ ಪರಿಣಾಮ ಅಪಾರ ಕೃಷಿ ನಾಶವಾಗಿದೆ.
ಮುರೂರು ಪ್ರದೇಶದ ಹರೀಶ್ , ಲವ ಕುಮಾರ್ ಎಂಬುವವರ ತೋಟಗಳಿಗೆ ಕಾಡಾನೆ ದಾಳಿ ನಡೆಸಿ ಬಾಳೆ , ಅಡಿಕೆ ಸಸಿ, ತೆಂಗು, ಕೊಕ್ಕೊ ಗಿಡಗಳನ್ನು, ಕೃಷಿಗೆ ನೀರುಣಿಸಲು ಅಳವಡಿಸಲಾದ ಪೈಪು ಇನ್ನಿತರ ಪರಿಕರಗಳನ್ನು ಪುಡಿಗಟ್ಟಿದೆ. ಘಟನೆಯಿಂದ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖ ಸಿಬ್ಬಂದಿಗಳು ಅಗಮಿಸಿ ಪರಿಶೀಲನೆ ನಡೆಸಿದ್ದಾರೆ.