ಮಂಡಿಪೇಟೆ ರಸ್ತೆಯಲ್ಲಿ ಗುಂಡಿ: ಶೀಘ್ರ ದುರಸ್ಥಿಗೆ ಶಾಸಕರ ಸೂಚನೆ

ತುಮಕೂರು, ಆ. ೩- ನಗರದ ಮಂಡಿಪೇಟೆ ಮುಖ್ಯರಸ್ತೆಯಲ್ಲಿ ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಆಳವಾದ ಗುಂಡಿ ಬಿದ್ದಿದೆ.
ಮಂಡಿಪೇಟೆ ರಸ್ತೆಯಲ್ಲಿ ಗುಂಡಿ ಬಿದ್ದಿರುವ ಸುದ್ದಿ ತಿಳಿದ ಕೂಡಲೇ ಶಾಸಕ ಜಿ.ಬಿ.ಜ್ಯೋತಿಗಣೇಶ್ ಭೇಟಿ ನೀಡಿ ಪರಿಶೀಲಿಸಿ, ಮಂಡಿಪೇಟೆಯಲ್ಲಿ ಭಾರೀ ವಾಹನಗಳ ಸಂಚಾರ ಇರುವುದರಿಂದ ಶೀಘ್ರವಾಗಿ ಸಮಸ್ಯೆಯನ್ನು ಬಗೆಹರಿಸುವಂತೆ ಸ್ಮಾರ್ಟ್‌ಸಿಟಿ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಮಂಡಿಪೇಟೆಯಲ್ಲಿ ಯಾವುದೇ ವಾಹನಗಳ ಸಂಚರಿಸುವಾಗ ಅವಘಡಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಚಾರಿ ಪೊಲೀಸರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಹೇಶ್‌ಬಾಬು, ಮಂಜುನಾಥ್, ಮಂಡಿಪೇಟೆ ವರ್ತಕರು ಇದ್ದರು.