ಮಂಡಳಿಯ ಸದಸ್ಯರಾಗಿ ಅಶೋಕ ಅಣ್ಣೆಪ್ಪ ಪಡಶೆಟ್ಟಿ ಐನಾಪೂರ ಆಯ್ಕೆ

ಕಲಬುರಗಿ.ಜ.4:ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿ ಜಿಲ್ಲೆಯಲ್ಲಿ ಖಾಲಿಯಿರುವ ಸದಸ್ಯ ಸ್ಥಾನಕ್ಕೆ ಸಂಬಂಧಿಸಿದಂತೆ ಸೋಮವಾರ ಜನವರಿ 4 ರಂದು ಜರುಗಿದ ಚುನಾವಣೆಯಲ್ಲಿ ಚಿಂಚೋಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಅಶೋಕ ಅಣ್ಣೆಪ್ಪ ಪಡಶೆಟ್ಟಿ ಐನಾಪೂರ ಅವರು ಹೆಚ್ಚಿನ ಮತವನ್ನು ಪಡೆದು ಮಂಡಳಿಯ ಸದಸ್ಯರಾಗಿ ಚುನಾಯಿತರಾಗಿದ್ದಾರೆ ಎಂದು ಕಲಬುರಗಿ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರಾದ ಶೈಲಾಜಾ ಎಂ.ವಿ. ಅವರು ತಿಳಿಸಿದ್ದಾರೆ.
ಈ ಮಂಡಳಿಯಲ್ಲಿ ಖಾಲಿಯಿರುವ ಸದಸ್ಯ ಸ್ಥಾನಕ್ಕೆ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಾವಳಿಗಳ ರನ್ವಯ ಚುನಾವಣೆ ನಡೆಸಲಾಯಿತು. ಚುನಾವಣೆಯಲ್ಲಿ ಒಟ್ಟು ನಾಲ್ಕು ಜನರು ಸ್ಪರ್ಧಿಸಿದರು.
ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಗುರುಬಸಪ್ಪ ಶಿವಶರಣಪ್ಪ ಕಣಕಿ, ಚಿತ್ತಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸಿದ್ದಣಗೌಡ ಗಂಗಾಧರ ಅವರಾದಕರ್, ಚಿಂಚೋಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಅಶೋಕ ಅಣ್ಣೆಪ್ಪ ಪಡಶೆಟ್ಟಿ ಐನಾಪೂರ ಹಾಗೂ ಅಫಜಲಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ರಾಮಣ್ಣ ಶರಣಪ್ಪ ನಾಯ್ಕೋಡಿ ಅವರು ಸ್ಪರ್ಧಿಸಿದರು.