ಮಂಡಲ ಮಟ್ಟದ 2 ದಿನದ ಪ್ರಶಿಕ್ಷಣ ವರ್ಗದ ಉದ್ಘಾಟನೆ

ಮೈಸೂರು, ನ.20: ಭಾರತೀಯ ಜನತಾ ಪಾರ್ಟಿ, ಮಂಡಲ ಮಟ್ಟದ 2 ದಿನದ ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮವು ಶ್ರೀ ನಾಮದೇವ ಭವನದಲ್ಲಿ ಜರುಗಿತು.
ವಂದೇ ಮಾತರಂ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ದೀಪ ಹಚ್ಚಿ ಭಾರತ ಮಾತೆಯ ಫೆÇೀಟೋಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.
ಶಾಸಕ ಎಸ್.ಎ. ರಾಮದಾಸ್ ಅವರು ಮಾತನಾಡಿ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಪ್ರದರ್ಶನವನ್ನು ಮಾಡಲಾಗಿದ್ದು. ಆ ಸಾಧನೆಗಳ ಬಗ್ಗೆ ನಿಮಗೇನೆನ್ನಿಸುತ್ತದೆ ಅದರಲ್ಲಿ ಬದಲಾವಣೆ ತರಬೇಕು ಎಂದೆನಿಸಿದರೆ ಅದರ ಬಗ್ಗೆ ಸಲಹೆಗಳನ್ನು ಸಂಕ್ಷೀಪ್ತವಾಗಿ ಬರೆದು ನೀಡಿ ಎಂದು ತಿಳಿಸಿದರು.
ನಗರ ಬಿಜೆಪಿ ಅಧ್ಯಕ್ಷ ಶ್ರೀ ವತ್ಸ ಅವರು ಮಾತನಾಡಿ ಅಭ್ಯಾಸವರ್ಗಗಳು ಈ ಹಿಂದೆ 7 ದಿನಗಳ ಕಾಲ ನಡೆಯುತ್ತಿತ್ತು. ಈಗ 2 ದಿನಕ್ಕೆ ಬಂದು ನಿಂತಿದೆ. ಯಾವುದೇ ಅಭ್ಯಾಸ ವರ್ಗ ಇಷ್ಟು ಅಚ್ಚುಕಟ್ಟಾಗಿ ನಡೆಯಲು ಸಾಧ್ಯವಿಲ್ಲ, ಬಿಜೆಪಿಯಲ್ಲಿ ಮಾತ್ರ ಇವೆಲ್ಲಾ ಸಾಧ್ಯ. ಎಲ್ಲಾ ಶಿಕ್ಷಾರ್ಥಿಗಳೂ ಸಹ ಆಸಕ್ತಿಯಿಂದ ಭಾಗವಹಿಸಿ ಎಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಬಿಜೆಪಿ ಬೆಂಗಳೂರು ವಿಭಾಗ ಪ್ರಭಾರಿ ಗೋಪಿನಾಥ್ ರೆಡ್ಡಿ, ರಾಜ್ಯ ಬಿಜೆಪಿ ಒ.ಬಿ.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ನಗರ ಪ್ರಧಾನ ಕಾರ್ಯದರ್ಶಿ ವಾಣಿಶ್ರೀ, ಬಿಜೆಪಿ ಕೆ.ಆರ್.ಕ್ಷೇತ್ರದ ಅಧ್ಯಕ್ಷ ವಡಿವೇಲು .ಎಂ ಇತರರು ಭಾಗವಹಿಸಿದ್ದರು.