ಮಂಡಲಗೆರಿ  ಗ್ರಾ ಪಂ. ಅಧ್ಯಕ್ಷ ರಾಗಿ ದೇವಕ್ಕ ಉಪಾಧ್ಯಕ್ಷರಾಗಿ ಮಹೇಂದ್ರ   ಅವಿರೋಧ ಆಯ್ಕೆ 


ಸಂಜೆವಾಣಿ ವಾರ್ತೆ
ಕುಕನೂರು:ಜು,18 ತಾಲೂಕಿನ ಮಂಡಲ ಗೆರಿ ಗ್ರಾಮ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸೋಮವಾರ ನಡೆಯಿತು. ಅಧ್ಯಕ್ಷರಾಗಿ ದೇವಕ್ಕ ಈಳಿಗೆರ್ ಹಾಗೂ ಉಪಾಧ್ಯಕ್ಷರಾಗಿ ಚಿಕ್ಕೆನಕೊಪ್ಪ ಗ್ರಾಮದ ಮಹೇಂದ್ರ ಗದಗ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಶಿವ ಶಂಕರ ಕರಡಕಲ್ ಚುನಾವಣೆಯ ಜವಾಬ್ದಾರಿ ನೀವ೯ಹಿಸಿದರು. ನಂತರ ಅಭಿಮಾನಿಗಳಿಂದ ಸಂಭ್ರಮಾಚರಣೆ ನಡೆಯಿತು. ಗ್ರಾಮದ ಅಭಿವೃದ್ಧಿಗೆ ಹಾಗೂ ಮೂಲ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನಿಸಲಾಗುವುದು ಎಂದು ನೂತನ ಅಧ್ಯಕ್ಷರು ಉಪಧ್ಯಕ್ಷರು ಭರವಸೆ ನೀಡಿದರು.ಮುಖಂಡರಾದ ಜೋಶಿ,ಹನುಮಂತಪ್ಪ ಉಪ್ಪಾರ್, ಬಸಯ್ಯ ಸಸಿಮಠ,ಲಿಂಗನಗೌಡ ಹೊರಪೆಟ್, ವೆಂಕಟೇಶ್ ಇಳಗೆರ್, ಚಿದಾನಂದಪ್ಪ ಸೇರಿ ಅನೇಕ ಗಣ್ಯರು ಸಮಾರಂಭದಲ್ಲಿ ಶುಭ ಕೋರಿದರು.