ಮಂಡಕ್ಕಿಭಟ್ಟಿಯಲ್ಲಿನ ಸಮಸ್ಯೆಗಳ ನಿವಾರಣೆಗೆ ಒತ್ತಾಯ

ದಾವಣಗೆರೆ.ನ.೧೧: ಕಳೆದ 35ವರ್ಷಕ್ಕೂ ಹೆಚ್ಚಿನ ಕಾಲದಿಂದಲೂ ಮಂಡಕ್ಕಿಭಟ್ಟಿ ಜ್ವಲಂತ ಸಮಸ್ಯೆಗಳ ಆಗರವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಲು ಮುಂದಾಗಬೇಕಿದೆ ಎಂದು ಮಂಡಕ್ಕಿ ಭಟ್ಟಿ ತಯಾರಕ, ಸಂಘದ ಮಾಜಿ ಅಧ್ಯಕ್ಷ ಮಹಮ್ಮದ್ ಅರ್ಷದ್ ಮುನ್ನಾ ಆಗ್ರಹಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ನಗರದಲ್ಲೇ 750ಕ್ಕೂ ಹೆಚ್ಚು ಮಂಡಕ್ಕಿಭಟ್ಟಿ ಕಾರ್ಯ ನಿರ್ವಹಿಸುತ್ತವೆ. ಅದರಲ್ಲಿ ಕೆಲವು ಸುಧಾರಿತ ಮಂಡಕ್ಕಿ ಭಟ್ಟಿಗಳಿದ್ದರೆ, ಇನ್ನೂ ಕೆಲವು ಹಳೆಯ ಮಾದರಿಯಲ್ಲಿವೆ. ಅದರೆ, ಹಿಂದಿನಂತೆ ಟೈರುಗಳನ್ನು ಸುಡುವ ಬದಲಿಗೆ ಶೇಂಗಾದ ಹೊಟ್ಟು , ಕಟ್ಟಿಗೆ ಬಳಕೆ ಮಾಡಲಾಗುತ್ತದೆ. ಆದರೂ ಇನ್ನೂ ಹಲವಾರು ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಈ ಕುರಿತು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಮನವಿ ಮಾಡಿದರು.ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮಂಡಕ್ಕಿ ಉತ್ಪಾದನೆ ಮತ್ತು ಮಾರಾಟ ಮಾಡುವ ದುಸ್ಥಿತಿ ತಲುಪಿದೆ. ಈ ಕೆಲಸದಿಂದ ನಮ್ಮ ಜೀವನ ನಡೆಸುವುದು ಕಷ್ಟವಾಗಿದೆ. ಕಾರಣ ಸರ್ಕಾರದ ಅವಶ್ಯಕತೆ ಇದೆ. ಹಲವಾರು ವರ್ಷಗಳಿಂದ ಈ ಕೆಲಸದಲ್ಲಿ ನಮ್ಮ ಕುಟುಂಬಗಳು ಅವಲಂಬಿತವಾಗಿದ್ದು, ನಮಗೆ ಪರ್ಯಾಯ ಕೆಲಸ ಮಾಡುವುದು ಬರುವುದಿಲ್ಲ. ಇಂಥ ಸಂದರ್ಭದಲ್ಲಿ ಮಂಡಕ್ಕಿ ಭಟ್ಟಿಯ ಉತ್ಪಾದನೆ ಬೇಡಿಕೆ ಕೂಡ ಕುಸಿದಿದ್ದು, ನಾವುಗಳು ನಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಸಂಸದರು ಸರ್ಕಾರದಿಂದ ಸಾಲ ಕೊಡುವುದಾಗಿ ಹೇಳಿದ್ದಾರೆ. ಆದರೆ ಇದು ಯಾವ ರೀತಿ ನೀಡಲಾಗುತ್ತಿದೆ ಎನ್ನುವ ಬಗ್ಗೆ ನನಗೆ ಮಾಹಿತಿಯಿಲ್ಲ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ನಮಗೆ ಮಾಹಿತಿ ನೀಡಬೇಕು. ಇದಲ್ಲದೆ ದಾವಣಗೆರೆಯಲ್ಲಿ ನಡೆಸಲಾಗುತ್ತಿರುವ ಮಂಡಕ್ಕಿ ಭಟ್ಟಿಗಳನ್ನು ನಗರದ ಸುತ್ತಮುತ್ತಲಿನ ಹತ್ತು-ಹನ್ನೆರಡು ಕಿಲೋ ಮೀಟರ್ ಪ್ರದೇಶದಲ್ಲಿ ಸ್ಥಳಾಂತರ ಮಾಡಿದರೆ ನಮಗೆ ಯಾವುದೇ ಅಭ್ಯಂತರ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಮೀವುಲ್ಲಾ, ಅಬ್ದುಲ್ ಸತ್ತಾರ್ ಸಾಬ್, ಮೊಹಮ್ಮದ್ ಆರಿಫ್, ಅಬ್ದುಲ್ ಗಫರ್ ಸಾಬ್ ಇತರರು ಇದ್ದರು.