
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.15: ನಗರದ ಶ್ರೀ ಮಂಜುನಾಥ ಲಲಿತ ಕಲಾ ಬಳಗವು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ, ನಗರದ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಾಹದ್ಯಾಲಯದಲ್ಲಿ ವಿಶ್ವ ಚಿತ್ರಕಲಾ ದಿನಾಚರಣೆಯನ್ನು ಇಂದು ಆಚರಿಸಲಾಯಿತು.
ಕಾರ್ಯಕ್ರಮದ ರೂವಾರಿ ಮಂಜುನಾಥ ಗೋವಿಂದವಾಡ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ವಿಶ್ವ ಚಿತ್ರಕಲಾ ದಿನಾಚರಣೆಯನ್ನ ಆಚರಿಸುವುದರ ಮಹತ್ವ ಔಚಿತ್ಯ ಏನು ಎನ್ನುವುದನ್ನು ಸಂಕ್ಷಿಪ್ತವಾಗಿ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಂತಹ ಎಸ್‌ಜಿ ಕಾಲೇಜಿನ ನಿವೃತ್ತ ಉಪನ್ಯಾಸಕ ರವೀಂದ್ರನಾಥ ಅವರು ಲಿಯೋನಾಳ ಡ್ರೈವಿಂಗ್ಚಿ ಅವರ ಬಹುಮುಖಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಕೇವಲ ಒಬ್ಬ ಕಲಾವಿದನಾಗಿ ಜಗತ್ತಿಗೆ ಪರಿಚಯವಿದ್ದಂತಹ ಅವರಲ್ಲಿ ಒಬ್ಬ ಕಲಾವಿದನ ಜೊತೆಗೆ ಒಬ್ಬ ತತ್ವಜ್ಞಾನಿ,ಒಬ್ಬ ಚಿಂತಕ, ಒಬ್ಬ ವಿಜ್ಞಾನಿಯನ್ನು ಕೂಡ ಪರಿಚಯಿಸಿದರು. ತನ್ನ ಪ್ರೀತಿಯ ವಿದ್ಯಾರ್ಥಿಯಂತೆ ನಾಡಿನಾದ್ಯಂತ ಕೀರ್ತಿಯನ್ನು ಹೊಂದಲಿ ಅಂತ ಹೇಳಿ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೀಡಿದ ಪತ್ರಕರ್ತ ಶಶಿಧರ ಮೇಟಿ ಮಾಧ್ಯಮದಲ್ಲಿ ಚಿತ್ರಕಲೆಯ ಮಹತ್ವವನ್ನು ಕುರಿತಂತೆ ತಿಳಿಸಿಕೊಟ್ಟರು ಮಾಧ್ಯಮ ಮತ್ತು ಚಿತ್ರಕಲೆಗಳೆರಡು ಕೂಡ ನಿಕಟವಾಗಿರುವಂತಹ ಬಾಂಧವ್ಯವನ್ನು ಹೊಂದಿವೆ ಅವೆರಡೂ ಬೇರೆ ಬೇರೆ ಎಲ್ಲ ಒಂದೇ ನಾಣ್ಯದ ಮುಖಗಳನ್ನು ತಿಳಿಸಿದರು.
ಉಪನ್ಯಾಸಕ ಡಾಕ್ಟರ್ ಅಣ್ಣಾಜೆ ಕೃಷ್ಣಾರೆಡ್ಡಿ ಅವರು ರಂಗಭೂಮಿಯಲ್ಲಿ ಚಿತ್ರಕಲೆಯ ಮಹತ್ವವನ್ನು ಕುರಿತಂತೆ ವಿವರಿಸುತ್ತ ವಾಸ್ತವಿಕತೆ ಹಾಗೂ ಕಲ್ಪನೆಗಳ ಭಾವನೆಗಳನ್ನು ಬಿಂಬಿಸುವಲ್ಲಿ ವ್ಯಕ್ತಿಯ ನೈಜ ಭಾವನೆಗಳನ್ನು ಪ್ರತಿನಿಧಿಸುವಲ್ಲಿ ಅವನಲ್ಲಿ ಇರುವಂತಹ ಸೃಜನಶೀಲತೆಯನ್ನು ಹೊರ ತರುವಲ್ಲಿ ಚಿತ್ರಕಲೆ ಅತ್ಯಂತ ಪ್ರಮುಖವಾದಂತ ಪಾತ್ರವನ್ನು ವಹಿಸುತ್ತದೆಂದರು.
ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಚೋರನೂರು ಕೊಟ್ರಪ್ಪ ಮಾತನಾಡಿ, ಚಿತ್ರಕಲೆ ಹೇಗೆ ವಿವಿಧ ಆಯಾಮಗಳಲ್ಲಿ ಬೆಳೆದು ಬಂತು. ನೀವು ಕೂಡನು ನಿರಂತರವಾದಂತಹ ಶ್ರಮವಹಿಸಿ ಸಾಧನೆ ಮಾಡಿ ಮಂಜುನಾಥ್ ಗೋವಿಂದ ವಾಡ್ರಂತ ಶ್ರೇಷ್ಠ ಕಲಾವಿದರಾಗಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷೆ ಕಾತ್ಯಾಯಿನಿ ಮರಿದೇವಯ್ಯ ಮಾತನಾಡಿ, ಮಂಜುನಾಥ್ ಗೋವಿಂದವಾಡರಲ್ಲಿ ಇರುವಂತಹ ಅಪಾರವಾದಂತಹ ಕಲೆಯನ್ನು ಮೆಚ್ಚಿಕೊಂಡರು ಒಬ್ಬ ಕಲಾವಿದ ರಾತ್ರೋರಾತ್ರಿ ಕಲಾವಿದನಾಗಲು ಸಾಧ್ಯವಿಲ್ಲ ಹಲವಾರು ವರ್ಷಗಳ ನಿರಂತರವಾದಂತಹ ಶ್ರಮ ಇದಕ್ಕೆ ಅತ್ತೆಗತ್ತೆ ಅಂತಹ ನಿರಂತರ ಶ್ರಮ ಹಾಗೂ ಸಾಧನೆಯನ್ನು ಹೊಂದಿದಂತಹ ಮಂಜುನಾಥ್ ಗೋವಿಂದವಾಡ ಅವರು ರಾಷ್ಟ್ರಮಟ್ಟದ ಕಲಾವಿದರಾಗಿ ಬೆಳಗಲಿ ನಮ್ಮ ವಿದ್ಯಾರ್ಥಿಗಳಲ್ಲಿ ಕೂಡ ಅಂತಹ ಪ್ರತಿಭೆಯನ್ನು ಹೊರ ತರಲು ಆದಷ್ಟು ಬೇಗನೆ ನಮ್ಮ ಮಹಾವಿದ್ಯಾಲಯದಲ್ಲಿ ಕೂಡ ಇಂತಹ ಕಲಾತ್ಮಕವಾಗಿರುವಂತ ಕಾರ್ಯಕ್ರಮಗಳನ್ನ ಆಯೋಜಿಸಲಿ ಎಂದರು.
ಕಾಲೇಜಿನ ವಿದ್ಯಾರ್ಥಿ ಲಕ್ಷ್ಮಿ ಪ್ರಾರ್ಥನೆ, ಶ್ರಾವಣಿ ಸ್ವಾಗತಿಸಿದರೆ. ಪದ್ಮಾವತಿ ವಂದನಾರ್ಪಣೆ ಮಾಡಿದರು. ಕಾಲೇಜಿನ ಉಪನ್ಯಾಸಕ ಡಾಕ್ಟರ್ ವಿಕ್ರಂ ಪಿ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಪ್ರಾಂಶುಪಾಲ ಡಾಕ್ಟರ್ ಸತೀಶ್ ಹಿರೇಮಠ, ಉಪನ್ಯಾಸಕರು ಕಲಾಭಿಮಾನಿಗಳು ಹಾಗೂ ಸಾಹಿತ್ಯ ಶಕ್ತರು ಭಾಗವಹಿಸಿದ್ದರು