ಮಂಜುನಾಥ ಮತ್ತು ಸಪ್ತಗಿರಿ ಆಹಾರ ಉತ್ಪನ್ನ ಘಟಕಕ್ಕೆ ಡಿಸಿ ಭೇಟಿ, ಪರಿಶೀಲನೆ

ಕಲಬುರಗಿ :ಫೆ.16: ನಗರದ ಶಹಾಬಾದ ರಸ್ತೆಯ ನಂದೂರ ಕೈಗಾರಿಕೆ ಪ್ರದೇಶದಲ್ಲಿರುವ ‘ಮಂಜುನಾಥ ಮತ್ತು ಸಪ್ತಗಿರಿ ಆಹಾರ ಉತ್ಪನ್ನ ಘಟಕ’ಕ್ಕೆ ಗುರುವಾರ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮತ್ತು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮೊಹಮ್ಮದ್ ನದಾಫ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು.
ಆಹಾರ ಉತ್ಪನ್ನದ ಗುಣಮಟ್ಟ, ಸ್ವಚ್ಚತೆ ಸೇರಿದಂತೆ ಘಟಕದ ಬಗ್ಗೆ ವೀಕ್ಷಣೆ, ಪರಿಶೀಲನೆ ಮಾಡಿದ ನಂತರ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಶಂಕರ ಆರ್.ಪಾಟೀಲ, ಶರಣಬಸಪ್ಪ ಆರ್.ಪಾಟೀಲ, ಸಿದ್ದರಾಮ ತಳವಾರ, ಶರಣಮ್ಮ ಬಿ.ಪಾಟೀಲ, ಮಹಾದೇವಿ, ಪ್ರಭವ ಪಟ್ಟಣಕರ, ಬಾಹುಬಲಿ ನಂದೂರ, ಸಂತೋಷ್ ಸೇರಿದಂತೆ ಇನ್ನಿತರರಿದ್ದರು.