ಮಂಜುನಾಥ ಬಳೆಗೆ ವೈದ್ಯ ರತ್ನ ಪ್ರಶಸ್ತಿ ಪ್ರದಾನ

ದೇವದುರ್ಗ.ಮಾ.೨೪-ಹೈದರಾಬಾದ್‌ನ ಪ್ರತಿಷ್ಠಿತ ಅಪೊಲೊ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಮಸರಕಲ್ ಗ್ರಾಮದ ಡಾ.ಮಂಜುನಾಥ ಬಳೆ ಅವರಿಗೆ ವೈದ್ಯ ರತ್ನ ಪ್ರಶಸ್ತಿ ಲಭಿಸಿದೆ.
ಮಸ್ಕಿ ತಾಲೂಕಿನ ಇರಕಲ್ ಗ್ರಾಮದ ಶ್ರೀ ಶಿವಶಕ್ತಿ ಪೀಠದಿಂದ ಕೊಡಮಾಡುವ ವೈದ್ಯ ರತ್ನ ಪ್ರಶಸ್ತಿಯನ್ನು ಶ್ರೀ ಮಠದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಠದ ಪೀಠಾಧಿಪತಿ ಬಸವಲಿಂಗ ಸ್ವಾಮೀಜಿ, ಪ್ರಥಮ ದರ್ಜೆ ಗುತ್ತೆದಾರರಾದ ವಿರೂಪಾಕ್ಷಪ್ಪ ಬಳೆ, ಸುನಂದ ಬಳೆ ಸೇರಿದಂತೆ ಇತರರು ಇದ್ದರು.