ಮಂಜುನಾಥ್ ವಿರುದ್ಧ ಟೀಕೆ ಸರಿಯಲ್ಲ-ನಂಜೇಗೌಡ

????????????????????????????????????????????????????????????????????????????????????????????????????????????????????????????????????????????????????????????????????????????????????????

ಮುಳಬಾಗಿಲು, ನ.೫:ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಹೆಚ್.ನಾಗೇಶ್ ಅವರು ಕೋಲಾರದಲ್ಲಿ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ವಿರುದ್ಧ ಮಾತನಾಡಿರುವುದು ಸರಿಯಿಲ್ಲ ಅವರಿಂದ ಮುಳಬಾಗಿಲು ಕ್ಷೇತ್ರದಲ್ಲಿ ಪಕ್ಷೇತರ ಶಾಸಕರಾಗಿ ಗೆಲ್ಲಲು ಸಾಧ್ಯವಾಗಿದ್ದು ಎಂಬುದನ್ನು ಮರೆತಿದ್ದೀರಿ ಶಾಸಕ ಸ್ಥಾನಕ್ಕೆ ಈಗಲೇ ರಾಜೀನಾಮೆ ನೀಡಿ ಮತ್ತೆ ಆಯ್ಕೆಯಾದರೆ ನಿಜವಾದ ನಿರ್ಮಾಪಕ, ಹೀರೋ ಸೇರಿದಂತೆ ಎಲ್ಲವೂ ನೀವೇ ಆಗಿರುತ್ತೀರಿ ಅನಂತರ ಮಾಜಿ ಶಾಸಕರ ಬಗ್ಗೆ ಮಾತನಾಡಿ ಎಂದು ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಬಳಗದ ದಲಿತ ಮುಖಂಡರು ಹೇಳಿದ್ದಾರೆ
ಮುಳಬಾಗಿಲು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಮಾತನಾಡಿ ಅಭಿವೃದ್ಧಿ ರಾಜಕಾರಣ ಎಂದು ಹೇಳುತ್ತಿದ್ದೀರಿ, ತಾಲೂಕಿನ ೩೦ ಗ್ರಾ.ಪಂಗಳಲ್ಲಿ ಆಯೋಜಿಸಿರುವ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಸ್ವೀಕರಿಸಿರುವ ಎಷ್ಟು ಅರ್ಜಿಗಳಿಗೆ ನ್ಯಾಯ ಒದಗಿಸಿದ್ದೀರಿ? ಈ ಪ್ರವಾಸದ ಹೆಸರಿನಲ್ಲಿ ಟಿಎ, ಡಿಎ ಪಡೆದುಕೊಂಡು ಸಾರ್ವಜನಿಕರ ಹಣವನ್ನು ಪಡೆದುಕೊಂಡು ಪೋಲು ಮಾಡಿರುವುದು ಸಾಧನೆಯಾಗಿದೆ ಎಂದು ದಲಿತ ಮುಖಂಡ ಮೆಕಾನಿಕ್ ಜಿ.ಶ್ರೀನಿವಾಸ್ ಆರೋಪಿಸಿದರು.
ತಾಲೂಕಿನಲ್ಲಿ ಮಾಜಿ ಶಾಸಕ ದಿವಂಗತ ನಂಗಲಿ ಪಿ.ಮುನಿಯಪ್ಪ ನಂತರ ಎಸ್ಸಿ ಬಲಗೈ ಸಮುದಾಯದ ಅವಕಾಶ ಸಿಕ್ಕಿರಲಿಲ್ಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ೭ ದಿನಗಳಲ್ಲಿ ನೀವು ಶಾಸಕರಾಗಿದ್ದೀರಿ, ಆ ಸಂದರ್ಭದಲ್ಲಿ ಈಗ ನಿಮ್ಮೊಂದಿಗೆ ಗುರ್ತಿಸಿಕೊಂಡಿರುವವರು ನಿಮ್ಮ ಬಗ್ಗೆ ಅಪಪ್ರಚಾರ ಮಾಡಿ ನೀವು ಎಸ್ಸಿ ಬಲಗೈ ಸಮುದಾಯಕ್ಕೆ ಸೇರಿಲ್ಲ ಎಂದು ಆರೋಪಿಸಿದ್ದರು, ಈಗ ನಿಮಗೆ ಮತ ಹಾಕಿಸಿದ ನಮ್ಮನ್ನು ಬಿಟ್ಟು ಬೇರೆಯವರಿಗೆ ರಾಜಕೀಯ ಮಾಡಲು ಹೊರಟಿದ್ದೀರಿ ಅವರಿಗಾದರೂ ನ್ಯಾಯ ಒದಗಿಸಿ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನಹರಿಸಿ ಎಸ್ಸಿ ಬಲಗೈ ಸಮುದಾಯದಲ್ಲಿ ಈಗ ಚಿಕ್ಕತಾಳಿ, ದೊಡ್ಡತಾಳಿ ಎಂಬ ಕಂದರವನ್ನು ಸೃಷ್ಟಿ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿರುವುದು ಸರಿಯಲ್ಲ ಸಮಾಜವನ್ನು ಒಂದು ಗೂಡಿಸಿ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದೆ, ದಲಿತ ಅಧಿಕಾರಿಗಳಾದ ತಾ.ಪಂ ಇ.ಒ ವರ್ಗಾವಣೆ, ದಲಿತ ಮಹಿಳೆ ಬಿ.ಇ.ಒ ರವರಿಗೆ ಕಿರುಕುಳ ಕೊಟ್ಟಿರುವುದು ಯಾರೆಂಬುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ, ೨ ವರ್ಷದಲ್ಲಿ ಮೂವರು ತಾ.ಪಂ ಇ.ಒಗಳು ವರ್ಗಾವಣೆಗೆ ಕಾರಣ ಯಾರೆಂಬುದು ಕ್ಷೇತ್ರದ ಜನತೆಗೆ ಗೊತ್ತಾಗಿದೆ ಅದಕ್ಕೆ ಚುನಾವಣೆಯಲ್ಲಿ ತಕ್ಕ ಉತ್ತರ ಸಿಗಲಿದೆ ಎಂದು ಪ್ರಶ್ನೆ ಮಾಡಿದರು.
ಸಭೆ ಸಮಾರಂಭಗಳಲ್ಲಿ ನನ್ನ ರಾಜಕೀಯ ಗುರು ಡಿ.ಕೆ.ಶಿವಕುಮಾರ್ ಎಂದು ಹೇಳುತ್ತೀರಿ ಈ ಹಿಂದೆ ಕೊತ್ತೂರು ಮಂಜಣ್ಣ ಅಭಿಮಾನಿ ಎಂದು ಹೇಳಿರುವುದನ್ನು ಮರೆತಿದ್ದೀರಿ, ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಜೆ.ಡಿ.ಎಸ್ ನ ರಿಯಾಜ್ ಅಹ್ಮದ್ ಅಧ್ಯಕ್ಷರಾಗಬೇಕೆಂದು ತಾಲೂಕಿನ ಎಲ್ಲಾ ಮುಖಂಡರು ಹೇಳಿದ್ದೀರಿ, ಅವರ ಹೆಸರನ್ನು ಬಹಿರಂಗ ಪಡಿಸಿ ನಿಮ್ಮ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಾರೆಂಬುದು ಸುಳ್ಳು ಆರೋಪವಾಗಿದೆ ಮುಂದಿನ ದಿನಗಳಲ್ಲಿ ಇವೆಲ್ಲವುಗಳ ಬಗ್ಗೆ ಜನರೇ ಪ್ರಶ್ನೆ ಕೇಳುವ ಕಾಲವೂ ದೂರವಿಲ್ಲ ಎಂದು ಟೀಕಿಸಿದರು. ದೇವರಾಯಸಮುದ್ರ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಜಮ್ಮನಹಳ್ಳಿ ಕೃಷ್ಣ, ಕಾಂಗ್ರೆಸ್ ಎಸ್ಸಿ ಸೆಲ್ ಮಾಜಿ ಅಧ್ಯಕ್ಷ ಕಾರ್ ವಿ.ಶ್ರೀನಿವಾಸ್, ಮುಖಂಡ ಬೈರಕೂರು ರಾಮಾಂಜಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದರು.