ಮಂಜುನಾಥ್ ಪ್ರಸಾದ್ ಜೆಡಿಎಸ್ ಏಜೆಂಟ್: ಅರೋಪ

ಕೋಲಾರ,ಮೇ,೧೯:ಬಂಗಾರಪೇಟೆ ಮೀಸಲು ಕ್ಷೇತ್ರದ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಅರ್ಥಿಕ ಸೌಲಭ್ಯಕ್ಕಾಗಿ ನಂಬಿದವರು ಕೈಕೊಟ್ಟ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಹಿನ್ನಡೆಯಾಗಿತ್ತು, ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಪಕ್ಷದ ಹಣದ ಹೊಳೆಯಲ್ಲಿ ನನಗೆ ಈಜಲು ಸಾಧ್ಯವಾಗದ ಕಾರಣ ಚುನಾವಣೆಯಲ್ಲಿ ಸೋಲನ್ನಾಪ್ಪ ಬೇಕಾಯಿತು. ಅದರೆ ಕೆಲವರು ನನ್ನ ವಿರುದ್ದ ಅಪಪ್ರಚಾರಗಳನ್ನು ಮಾಡುತ್ತಿರುವುದರಿಂದ ಸಾರ್ವಜನಿಕವಾಗಿ ಸತ್ಯಾಂಶವನ್ನು ಸ್ವಷ್ಟ ಪಡೆಸಲು ಮಾದ್ಯಮದ ಮುಂದೆ ಬಂದಿರುವುದಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಎ.ನಾರಾಯಣಸ್ವಾಮಿ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಚುನಾವಣೆಗೊ ಮುನ್ನ ಬಂಗಾರಪೇಟೆ ಕ್ಷೇತ್ರದ ಅಭಿವೃದ್ದಿಗಳಿಗೆ ರಾಜ್ಯದ ಮುಖ್ಯ ಮಂತ್ರಿಗಳಿಂದ ಅನುದಾನಗಳನ್ನು ಮಂಜೂರು ಮಾಡಿಸಿ ಕೊಂಡು ಬಂದರೂ ರಾಜ್ಯದ ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಅವರು ದುರುದ್ದೇಶ ಪೂರಕವಾಗಿ ಅನುದಾನಗಳನ್ನು ಬಿಡುಗಡೆ ಮಾಡದೆ ಅಡಚಣೆಗಳನ್ನು ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ನಮ್ಮ ಮೇಲೆ ಇದ್ದ ವಿಶ್ವಾಸಕ್ಕೆ ಭಂಗ ಉಂಟು ಮಾಡಿದರು ಎಂದು ಅರೋಪಿಸಿದರು,
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಅವರ ಪುತ್ರ ಬಂಗಾರಪೇಟೆಯಲ್ಲಿ ಸ್ವರ್ಧಿಸಿರುವ ಜೆ.ಡಿ.ಎಸ್. ಅಭ್ಯರ್ಥಿ ಎಂ. ಮಲ್ಲೇಶ್ ಅವರು ಬಿಜೆಪಿ ಸರ್ಕಾರ ಮಾಡುವ ಅಭಿವೃದ್ದಿ ಯೋಜನೆಗಳನ್ನು ಬಂಗಾರಪೇಟೆಯಲ್ಲಿ ಅನುಷ್ಠನಗೊಳಿಸದಂತೆ ತಮ್ಮ ಭಾವ ( ಮಂಗಮ್ಮ ಮುನಿಸ್ವಾಮಿ ಅವರ ಅಳಿಯ) ಮಂಜುನಾಥ್ ಪ್ರಸಾದ್ ಅವರಿಂದ ಜಾರಿಯಾಗದಂತೆ ನಿಯಂತ್ರಿಸುತ್ತಿದ್ದರು, ದೇವರು ವರ ಕೊಟ್ಟರೂ ಪೂಜಾರಿ ಕೊಡ ಎಂಬ ಗಾದಯಂತೆ ನಮ್ಮ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಕ್ಷೇತ್ರದಲ್ಲಿ ಅಭಿವೃದ್ದಿಯ ಕೆಲಸಗಳು ಮಾಡಲಾಗಲಿಲ್ಲ. ಈ ಸಂಬಂಧವಾಗಿ ಮುಖ್ಯ ಮಂತ್ರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಅವರಿಗೆ ತಮ್ಮ ಪ್ರಧಾನಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಜೆ.ಡಿ.ಎಸ್. ಪಕ್ಷದ ಏಜೆಂಟ್ ಎಂದು ಗೊತ್ತಿರಲಿಲ್ಲ ಎಂದರು,
ಬಂಗಾರಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ೨೩ ಪಂಚಾಯಿತಿಗಳ ಪೈಕಿ ೧೭ ಪಂಚಾಯಿತಿ ಬಿಜೆಪಿ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿಯಲ್ಲಿ ಇಬ್ಬರೂ ಬಿಜೆಪಿ ಸದಸ್ಯರು, ಪಿ.ಎಲ್.ಡಿ. ಬ್ಯಾಂಕ್ ಎ.ಪಿ.ಎಂ.ಸಿ. ಎಲ್ಲವೂ ಬಿಜೆಪಿ ಪಾಲು ಅಗಿದ್ದು ನಾನು ಚುನಾವಣೆಯಲ್ಲಿ ಎಲ್ಲಾ ಹಂತದಲ್ಲೂ ಮುಂಚೋಣಿಯಲ್ಲಿದ್ದವನು ಚುನಾವಣೆ ಸಮೀಪಿಸುವ ೩ ದಿನದ ಮುಂಚೆ ಅರ್ಥಿಕ ಸಂಪನ್ಮೋಲವು ಸಿಗದಂತೆ ಮಾಡಿದರು ಇದರಿಂದ ನನಗೆ ಹಿನ್ನಡೆ ಅಯಿತು ಎಂದ ಅವರು ಈ ಹಿಂದೆ ಚುನಾವಣೆಗಾಗಿ ನನ್ನ ಹಲವಾರು ಆಸ್ತಿ ಪಾಸ್ತಿಗಳನ್ನು ಕಳೆದು ಕೊಂಡಿದ್ದೇನೆ ಹೊರತಾಗಿ ಶಾಸಕವಾಗಿ ನಾನು ಯಾವೂದೇ ಆಸ್ತಿ ಪಾಸ್ತಿಗಳು ಮಾಡಿದವನಲ್ಲ , ನನ್ನ ವಿರುದ್ದ ಅಧಾರ ರಹಿತವಾಗಿ ಅರೋಪಗಳನ್ನು ಮಾಡಿದವರು ಆತ್ಮವಲೋಕ ಮಾಡಿ ಕೊಳ್ಳಲಿ ಎಂದು ಪ್ರಶ್ನೆಯೊಂದಕ್ಕೆ ಸ್ವಷ್ಟ ಪಡೆಸಿದರು,
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ತಂಬಳ್ಳಿ ಮುನಿಯಪ್ಪ, ಚುಂಜನಹಳ್ಳಿ ಪಂಚಾಯಿತಿ ನಾರಾಯಣಸ್ವಾಮಿ, ದೊಣಿಮಡುಗು ಪಂಚಾಯಿತಿ ಶಿವರಾಜ್, ಎ.ಪಿ.ಎಂ.ಸಿ. ಉಪಾಧ್ಯಕ್ಷ ವೆಂಕಟಮುನಿಯಪ್ಪ. ದೇವರಾಜ್ ಉಪಸ್ಥಿತರಿದ್ದರು.