ಮಂಜುನಾಥ್‌ರಿಂದ ಶಿವಾಚಾರ್ಯರ ಭೇಟಿ

ಕೋಲಾರ,ಜು,೪:ತಾಲ್ಲೂಕಿನ ರಾಷ್ಟ್ರಿಯ ಹೆದ್ದಾರಿಯಲ್ಲಿನ ತಾಲ್ಲೂಕಿನ ನಾಗಲಾಪುರದ ಮಹಾ ಸಂಸ್ಥಾನಕ್ಕೆ ಗುರು ಪೂರ್ಣಿಮೆ ಪ್ರಯುಕ್ತ ಶಾಸಕ ಕೊತ್ತೂರು ಮಂಜುನಾಥ್ ಅವರು ತಮ್ಮ ಧರ್ಮಪತ್ನಿಯವರೊಂದಿಗೆ ಭೇಟಿ ನೀಡಿ ಪೀಠಾಧಿಪತಿ ಶ್ರೀತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ದರ್ಶನ ಮಾಡಿ ಆಶೀರ್ವಾದ ಪಡೆದರು, ವೀರಶೈವ ಮಹಾ ಸಭಾದ ಜಿಲ್ಲಾ ಉಪಾಧ್ಯಕ್ಷ ಕೆ.ಬಿ.ಬೈಲಪ್ಪ. ಎನ್.ಆರ್. ಪ್ರಭಾಕರ್,ನಂಜಪ್ಪ ಒಡೆಯರ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಮುಂತಾದವರು ಹಾಜರಿದ್ದರು,