ಮಂಜಿನ ಹನಿಯಲ್ಲಿ ಭಾವೈಕ್ಯತೆ ಮೆರೆದ ಸೇನಾನಿ ಲಂಕಯ್ಯ ಸಾದಾಪೂರು

ಚಂದ್ರಶೇಖರ ಮದ್ಲಾಪೂರ
ಮಾನವಿ :- ತಾಲೂಕಿನ ಸಾದಾಪೂರು ಗ್ರಾಮದ ಬಡ ಕುಟುಂಬದ ರೈತನ ಮಗನಾದ ಲಂಕಯ್ಯ ಸಾದಾಪೂರು ಇವರು ಕಳೆದ ೧೬ ವರ್ಷಗಳಿಂದ ಭಾರತೀಯ ರಕ್ಷಣಾ ಕವಚವಾಗಿ ದೇಶವನ್ನು ಕಾಯುವ ಸೈನಿಕನಾಗಿ ಸೇವೆ ಸಲ್ಲಿಸುತ್ತಾರೆ ಆದರೆ ಜನವರಿ ೧೨ ರಂದು ಜಮ್ಮು ಕಾಶ್ಮೀರದ ಕಣಿವೆ ಬಂಡೀಪುರ ವ್ಯಾಪ್ತಿಯಲ್ಲಿ ಮೈನಸ್ ೯ ರ ತಾಪಮಾನದಲ್ಲಿ ದೇಶಪ್ರೇಮ ಮೆರೆದ ವಿಡಿಯೋ ಈಗ ಅಂತರಜಾಲದಲ್ಲಿ ವೈರಲ್ ಆಗಿದೆ, ನಮ್ಮ ಹೆಮ್ಮೆಯ ಭಾರತ ದೇಶವಿದು, ಇಲ್ಲಿ ಅತಿಯಾದ ತಂಗಾಳಿಯ ಚಳಿ ಇದೆ, ಇಲ್ಲಿಯೇ ನನ್ನ ಸೇವೆ, ನಾನು ನಿಮ್ಮ ಸಂರಕ್ಷಕ, ನನ್ನಯ ಸೇವೆಯೂ ನಿಮಗಾಗಿ ನಿರಂತರ, ವೀರ ಮರಣ ಹೊಂದುವುದಕ್ಕೂ ನಾ ಸಿದ್ದ ಎನ್ನುವ ಮಾತುಗಳನ್ನಾಡಿದ ವಿಡಿಯೋ ಈಗ ವೈರಲ್ ಆಗಿ ರಾಯಚೂರು ಜಿಲ್ಲಾ ಸೇರಿದಂತೆ ರಾಜ್ಯದ ಜನರ ಪ್ರಶಂಸೆಗೆ ಪಾತ್ರವಾಗಿದೆ.
ಲಂಕಯ್ಯ ಸಾದಾಪೂರು ಇವರು ಬಡತನದಲ್ಲಿ ಹುಟ್ಟಿ ಬೆಳೆದವರಾಗಿದ್ದು ಕಳೆದ ೧೬ ವರ್ಷಗಳಿಂದ ಸೈನಿಕ ಸೇವೆಯಲ್ಲಿದ್ದಾರೆ ಅವರು ಈಗಾಗಲೇ ದೆಹಲಿ,ಕಲ್ಕತ್ತಾ, ಹೈದರಾಬಾದ್, ಕರ್ನಾಟಕ, ಕೇರಳ, ಜಮ್ಮು ಕಾಶ್ಮೀರ ಸೇರಿದಂತೆ ಅನೇಕ ಯುವ ಕಣಿವೆಯಲ್ಲಿ ಭಾಗವಹಿಸಿ ದೇಶದ,ರಾಜ್ಯದ, ಅಲ್ಲದೇ ರಾಯಚೂರು ಜಿಲ್ಲೆಯ ಹೆಮ್ಮೆಯ ಪುತ್ರರಾಗಿದ್ದಾರೆ ಇವರು ಈಗ ಕಾಶ್ಮೀರದ ಬಂಡೀಪುರ ವ್ಯಾಪ್ತಿಯಲ್ಲಿ ಕಾರ್ಯನಿರ್ವಾಹಿಸುತ್ತಿದ್ದು ಅಲ್ಲಿನ ತಾಪಮಾನ ಕನಿಷ್ಠ ೮-೧೨ ರವರೆಗೆ ಆಗುತ್ತದೆ ಕೊರೆಯುವ ಚಳಿಯನ್ನು ಲೆಕ್ಕಿಸದೆ ಇನ್ನೂ ಹಲವಾರು ದಿನಗಳವರೆಗೆ ಅನೇಕ ಸೈನಿಕ ಸೇನೆಯು ಅಲ್ಲಯೇ ವಾಸ ಮಾಡಿ ದೇಶದ ಜೊತೆಗೆ ನಮ್ಮನ್ನು ಕಾಣುವುದಕ್ಕೆ ಪಣದೊಂದಿಗೆ ಜೀವಿಸುತ್ತಿದ್ದಾರೆ.