ಮಂಗಳ ವಾದ್ಯ ಕಲಾವಿದರ ಸಂಘದ ಉದ್ಘಾಟನೆ

ದಾವಣಗೆರೆ.ಜ.೨೩; ನೂತನವಾಗಿ ದಾವಣಗೆರೆ ಜಿಲ್ಲಾ ಮಂಗಳ ವಾದ್ಯ ಕಲಾವಿದರ ಸಂಘದ ಉದ್ಘಾಟನಾ ಕಾರ್ಯಕ್ರಮವು ಈಚೆಗೆ ನಗರದ ಸವಿತಾ ಮಹರ್ಷಿ ಸಮುದಾಯದ ವೇದಿಕೆಯಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಂ. ಹಾಲೇಶ್ ಬಸವನಾಳ, ಎಸ್.ಪಿ. ರುದ್ರಮುನಿ, ಮಾಜಿ ಮಹಾಪೌರ ಬಿ.ಜಿ. ಅಜಯ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸವಿತ ಸಮಾಜದ ಜಿಲ್ಲಾಧ್ಯಕ್ಷ ರಂಗನಾಥ್, ನಾದಬ್ರಾಹ್ಮ ಕಲಾವಿದರ ಸಂಘದ ಅಧ್ಯಕ್ಷ ಮಂಜುನಾಥ್, ಡೇಕೋರೇಷನ್ ಸಂಘದ ಅಧ್ಯಕ್ಷ ಆಂಜನೇಯ, ಹಿರಿಯ ಕಲಾವಿದ ಮರುಳಸಿದ್ದಪ್ಪ, ಗಿಡ್ಡಯ್ಯ, ಸಾಯಿನಾಥ್, ರಾಮಚಂದ್ರಪ್ಪ, ಪ್ರಸಾದ್, ರಾಜು, ರಾಮು ಮತ್ತಿತರ ಕಲಾವಿದರು ಪಾಲ್ಗೊಂಡಿದ್ದರು.