ಮಂಗಳ ಜಲಾಶಯಕ್ಕೆ ಶಾಸಕ ರಂಗನಾಥ್ ಬಾಗಿನ

ಕುಣಿಗಲ್, ಆ. ೪- ಮಂಗಳ ಜಲಾಶಯವು ತುಂಬಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಶಾಸಕ ಡಾ. ಎಚ್.ಡಿ. ರಂಗನಾಥ್ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ತಾಲೂಕಿನಲ್ಲಿ ಮಂಗಳ ಜಲಾಶಯ ಸೇರಿದಂತೆ ಕುಣಿಗಲ್ ದೊಡ್ಡಕೆರೆ, ಚಿಕ್ಕಕೆರೆ, ದೀಪಾಂಬುದಿ ಕೆರೆ, ಮಾರ್ಕೋನಹಳ್ಳಿ ಜಲಾಶಯ ಕೆಂಚನಹಳ್ಳಿ ಕೆರೆಗಳು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತುಂಬಿದ್ದು, ಕಳೆದ ೧೧ ವರ್ಷಗಳ ಬಳಿಕ ಮಂಗಳ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿ ಬಂದಿದೆ. ಮಂಗಳ ಜಲಾಶಯಕ್ಕೆ ೧,೨೦೦ ಕ್ಯುಸಸ್ ನೀರು ಹರಿದು ಬರುತ್ತಿದ್ದು ಅಷ್ಟೇ ನೀರಿನ ಪ್ರಮಾಣವನ್ನ ಎಂಟು ಗೇಟುಗಳ ಮೂಲಕ ಹೊರ ಬಿಡಲಾಗುತ್ತಿದೆ ನೀರು ಹರಿಯುತ್ತಿರುವ ದೃಶ್ಯ ರುದ್ರ ರಮಣೀಯವಾಗಿದೆ ಎಂದರು.
ಈ ಅಚ್ಚುಕಟ್ಟು ಪ್ರದೇಶದಲ್ಲಿ ೯೪೦ ಹೆಕ್ಟೇರ್ ಪ್ರದೇಶದ ೨೩೦೦ ಎಕರೆ ಜಮೀನುಗೆ ನೀರು ಒದಗಿಸಲಾಗುತ್ತದೆ. ಅಚ್ಚುಕಟ್ಟು ಪ್ರದೇಶವಾದ ತೂಬಿನಕೆರೆ, ಕೊಡಿಗೆಹಳ್ಳಿ, ಸೊಂಡೆಕೊಪ್ಪ, ಹೊನಮಾಚನಹಳ್ಳಿ, ಗುಜ್ಜೇನಹಳ್ಳಿ ಹೊಸಪಾಳ್ಯ.ಅಂದಲಗೆರೆ . ಸಣಬಘಟ್ಟ ಸೇರಿದಂತೆ ನದಿ ಪಾತ್ರದ ಪ್ರದೇಶಗಳಿಗೆ ಜಾನ್ ಜನ ಜಾನುವಾರುಗಳು ಹೋಗಬಾರದಾಗಿ ಎಚ್ಚರಿಸಿದರು
ನಿರಂತರ ಮಳೆಗೆ ಮಾರ್ಕೋನಹಳ್ಳಿ ಜಲಾಶಯ ಹೊಳ ಹರಿವು ೨೨ ಸಾವಿರ ಕ್ಯೂಸೆಕ್ಸ್ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಈ ಅಚ್ಚುಕಟ್ಟು ಪ್ರದೇಶದ ಜನರು ಜಾನುವಾರಗಳು ಜಾಗೃತಿ ವಹಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ. ಕುಣಿಗಲ್ ದೊಡ್ಡಕೆರೆ, ಚಿಕ್ಕಕೆರೆ.ಬೇಗೂರು.ಕೊತ್ತಗೆರೆ ಕೆರೆ ಗಳು ಭರ್ತಿಯಾಗಿದ್ದು ಇನ್ನುಳಿದಂತೆ ತಾಲೂಕಿನ ಹಲವು ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದಿರುವುದು ರೈತರ ಮೊಗದಲ್ಲಿ ಸಂತಸ ಮೂಡಿದೆ ಎಂದರು.
ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಈಗಾಗಲೇ ಮಾರ್ಕೋನಹಳ್ಳಿ ಜಲಾಶಯದ ಭತ್ತದ ಬೆಳೆ ಬೆಳೆಯಲು ನೀರಿನ ನೀಡುತ್ತಿದ್ದು, ಅಧಿಕಾರಿಗಳೊಂದಿಗೆ ಚರ್ಜಿಸಿ ಕ್ರಮ ಕೈಗೊಳ್ಳಲಾಗುವುದು. ಆದರೆ ದೈವ ಕೃಪೆಯಿಂದ ಮಾರ್ಕೋನಹಳ್ಳಿ ಜಲಾಶಯ ೨ನೇ ಬಾರಿ ತುಂಬಿದೆ. ಮಂಗಳ ಜಲಾಶಯ ತುಂಬಿ ತುಳುಕುತ್ತಿವೆ. ಮುಂದಿನ ದಿನದಲ್ಲಿ ಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳ ಜಲಾಶಯಕ್ಕೆ ೬.೫ ಕೋಟಿ ವೆಚ್ಚದಲ್ಲಿ ಲಿಂಕ್ ಕೆನಾಲ್ ಕೈಗೊಳ್ಳಲಾಗುವುದು. ವರುಣನ ಆಶೀರ್ವಾದದಿಂದ ತಾಲ್ಲೂಕಿನ ಎಲ್ಲಾ ಕೆರೆಕಟ್ಟೆಗಳು ಭರ್ತಿಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ರೈತರು ಎಚ್ಚರ ವಹಿಸಬೇಕು ಎಂದರು.
ತಾಲ್ಲೂಕಿನಾದ್ಯಂತ ಸುರಿದಿರುವ ಭಾರೀ ಮಳೆಯಿಂದ ಹಾನಿಗೆ ಒಳಗಾಗಿರುವ ಮನೆಗಳು, ರೈತರ ಜಮೀನಿಗೆ ಆಗಿರುವ ಬೆಳೆ ಹಾನಿಗಳ ಬಗ್ಗೆ ವಿವರ ಪಡೆದು ಪರಿಹಾರ ನೀಡಲಾಗುವುದು. ಜಲಾಶಯಗಳು ಭರ್ತಿಯಾದ ಕಾರಣ ನದಿ ಪಾತ್ರದ ಜನರು ಯಾವುದೇ ಕಾರಣಕ್ಕೂ ನೀರಿಗೆ ಇಳಿಯಬಾರದು. ಜನ ಜಾನುವಾರಗಳನ್ನು ನಾಲೆ ಬಳಿ ಬಿಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಹೇಮಾವತಿ ಇಲಾಖೆಯ ಅಧಿಕಾರಿಗಳು, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಗ್ರಾ.ಪಂ ಪಿಡಿಓ ಹಾಗೂ ಕಾರ್ಯದರ್ಶಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಸೂಪರಿಟೆಂಡೆಂಟ್ ಇಂಜಿನಿಯರ್ ಕೃಷ್ಣಪ್ಪ, ಎಡೆಯೂರು ಹೇಮಾವತಿ ಕಾವೇರಿ ಕಾರ್ಯಪಾಲಕ ಇಂಜಿನಿಯರ್ ಮುರುಳಿ, ಇಂಜಿನಿಯರ್ ಗೋವಿಂದೇಗೌಡ, ಮುಖಂಡರಾದ ವೈ.ಎಚ್. ನಂಜೇಗೌಡ, ಹುಚ್ಚಮಾಸ್ತಿಗೌಡ, ಕೋಗಟ್ಟ ರಾಜಣ್ಣ, ದಿವಾಕರ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.