ಸಂಜೆವಾಣಿ ವಾರ್ತೆ
ಕುಕನೂರು, ಜೂ.22: ಮಂಗಳೂರಿನ ಶ್ರೀಮಂಗಳೇಶ್ವರ ಶಿಕ್ಷಣ ಸಂಸ್ಥೆಯ ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜ್ಞಾನಗಂಗಾ ಸಂಗೀತ ಪಾಠಶಾಲಾ ಆವರಣದಲ್ಲಿ ಕೊಟ್ರಪ್ಪ ತೋಟದ ಮುತ್ತಾಳ ಹಿರಿಯ ಪತ್ರಕರ್ತರು ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ 9ನೇ ಅಂತರಾಷ್ಟ್ರೀಯ ಯೋಗ ಶಿಬಿರದ ಉದ್ಘಾಟನಾ ಸಮಾರಂಭ ಜರುಗಿದಾಗ ಕೊಪ್ಪಳದ ಪತಂಜಲಿ ಯೋಗ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯ ಶಿವರಾಜ ಚಂದ್ರಶೇಖರ ಮುತ್ತಾಳ ಇವರು ಯೋಗದ ಮಹತ್ವ ಸದೃಢ ದೇಹಕ್ಕೆ ಇದರ ಉಪಯುಕ್ತತೆ ಕುರಿತು ಹಿತವಾಕ್ಯಗಳನ್ನು ಹೇಳಿದ ಇವರು ಪ್ರಧಾನಿ ನರೇಂದ್ರ ಮೋದಿ ಯವರಿಂದು ಅಮೇರಿಕಾ ಸಂಸ್ಥಾನದಲ್ಲಿ ಭಾರತದ ಕೀರ್ತಿ ಬೆಳಗಿಸುವ ಈ ಯೋಗ ಶಿಬಿರವನ್ನು ನಡೆಸುತ್ತಾ ರಾಷ್ಟ್ರದ ಕೀರ್ತಿಯನ್ನು ಜಗತ್ತಿನಲ್ಲಿ ಬೆಳಗಿಸುತ್ತಿದ್ದು ಇದು ಭಾರತೀಯರಿಗೆ ಹೆಮ್ಮೆಪಡುವ ಸಂಗತಿ ಎಂದು ಹೇಳಿ ಈ ಶಿಕ್ಷಣ ಸಂಸ್ಥೆಯಲ್ಲಿ ಅಚ್ಚುಕಟ್ಟಾಗಿ ಈ ಉಪಯುಕ್ತ ಕಾರ್ಯಕ್ರಮ ನಡೆಸಲು ಮುಂದಾಗಿರುವುದು ಇವರಿಗೆ ಇರುವ ಮಕ್ಕಳ ಉಜ್ವಲ ಭವಿಷ್ಯತ್ ಬೆಳೆಸುವ ಮಹೋನ್ನತ ಗುರಿ ಎಂದವರು ಹೇಳಿದ ಇವರು ಮುಂದಿನ ವರ್ಷ ಐದು ದಿನದ ತರಬೇತಿ ಶಿಬಿರ ನಡೆಸಿಕೊಡುವ ಆಲೋಚನೆ ತಮಗಿದೆ ಎಂದು ಹೇಳಿದರು.
ವಿಶ್ವನಾಥ ಮರಿಬಸಪ್ಪನವರ ಯಲಬುರ್ಗಾ ಬಿಜೆಪಿ ಮಂಡಲದ ಅಧ್ಯಕ್ಷರು ಪ್ರಾಸ್ತಾವಿಕ ನುಡಿಗಳಿಂದ ಈ ಸಂಸ್ಥೆಯವರು ಪ್ರತಿ ವರ್ಷ ಒಂದಿಲ್ಲೊಂದು ಮಕ್ಕಳ ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮ ನಡೆಸಿಕೊಡುತ್ತಿದ್ದು ಖಾಸಗಿ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ಮೊಟ್ಟಮೊದಲ ಈ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯುವುದೆಂಬ ಆಶಾವಾದದ ನುಡಿಗಳನ್ನಾಡಿದರು ರವೀಂದ್ರನಾಥ ಕೊಟ್ರಪ್ಪ ತೋಟದ ರವರು ಸಂಸ್ಥೆಯ ಕಾರ್ಯದರ್ಶಿ ಇವರು ಸ್ವಾಗತಿಸಿದರು ಮುಖ್ಯ ಅತಿಥಿಗಳಾಗಿ ವೀರೇಶ ಕುಂಬಾರ ಶಂಕರ ದೇಶಪಾಂಡೆ ಮುತ್ತು ತಳವಾರ ಪ್ರೀತಿ ದೇಸಾಯಿ ಮುಖ್ಯ ಗುರುಗಳು ಉಪಸ್ಥಿತರಿದ್ದರು ಶಿಕ್ಷಕರ ವೃಂದ ಪಾಲಕರ ಬಳಗ ಮಕ್ಕಳು ಒಂದುವರೆ ತಾಸು ಜರುಗಿದ ವಿವಿಧ ಆಯಾಮಗಳಲ್ಲಿ ಶಿಸ್ತುಬದ್ದ ಯೋಗ ಪಾಠವನ್ನು ಭೋದನಾ ಗುರು ಶಿವರಾಜ ಮುತ್ತಾಳರು ನಡೆಸಿಕೊಟ್ಟರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಪಾಲಕ ಪ್ರತಿನಿಧಿಗಳಿಗೆ ಶಿಕ್ಷಣ ಸಂಸ್ಥೆಯವರು ಪ್ರಸಾದದ ವ್ಯವಸ್ಥೆಯನ್ನು ಮಾಡಿಸಿದ್ದರು ಶಿಕ್ಷಕ ದೇವರಾಜ ರವರು ಆಭಾರ ಮನ್ನಿಸಿದರು.