ಮಂಗಳೂರ ರಾಷ್ಟ್ರೀಯ ವೈದ್ಯರ ದಿನಾಚರಣೆ


ಸಂಜೆವಾಣಿ ವಾರ್ತೆ
ಕುಕನೂರು, ಜು.02: ಸಮುದಾಯ ಆರೋಗ್ಯ ಕೇಂದ್ರ ಮಂಗಳೂರಿನಲ್ಲಿ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಆರೋಗ್ಯ ಕೇಂದ್ರದ ಎಲ್ಲಾ ಸಿಬ್ಬಂದಿಗಳ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ  ಹಮ್ಮಿಕೊಳ್ಳಲಾಯಿತು.
ವೈದ್ಯಾಧಿಕಾರಿಗಳಾದ ಡಾ. ಸಿಎಂ ಹಿರೇಮಠ್  ಡಾ ಭರಮನಾಯಕ್,  ಡಾ ಅಭಿಷೇಕ್, 
ಡಾ ಚಂದ್ರಕಾಂತ,ಡಾ ನೇತ್ರಾವತಿ & ಡಾ ಭೀಮಾಂಬಿಕಾ ರವರು ಕೇಕ್ ಕತ್ತರಿಸುವ ಮೂಲಕ ವೈದ್ಯರ ದಿನವನ್ನು ಆಚರಿಸಿದರು. ಕಾಯಕ್ರಮದಲ್ಲಿ ಸಿಬ್ಬಂದಿಗಳು ವೈದ್ಯರ ಕುರಿತು ಅನಿಸಿಕೆ ವ್ಯಕ್ತಪಡಿಸಿದರು ನಂತರ ಎಲ್ಲಾ ವೈದ್ಯಾಧಿಕಾರಿಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಊರಿನ ಯುವ ಮುಖಂಡರುಗಳಾದ ಸುರೇಶ ಮ್ಯಾಗಳೇಶಿ, ರಾಘವೇಂದ್ರ ಹಳ್ಳಿ ಸಿಬ್ಬಂದಿಗಳು & ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಂತಿನಿಕೇತನ ಹಿರಿಯ ಪ್ರಾಥಮಿಕ  ಶಾಲೆಯ ಮಕ್ಕಳು ಆರೋಗ್ಯ ಕೇಂದ್ರಕ್ಕೆ ಬಂದು ಎಲ್ಲಾ ವೈದ್ಯಾಧಿಕಾರಿಗಳಿಗೆ ಹೂಗುಚ್ಛ ನೀಡುವ ಮೂಲಕ ಶುಭಾಶಯ ಕೋರಿದರು. ರವೀಂದ್ರ ತೋಟದ ಉಪಸ್ಥಿತರಿದ್ದರು.

One attachment • Scanned by Gmail