
ಮೂಡುಬಿದಿರೆ, ಮಾ.೩೦- ಮಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಪರೀಕ್ಷೆಗಳ ರ್ಯಾಂಕ್ಪಟ್ಟಿ ಪ್ರಕಟಗೊಂಡಿದ್ದು, ಮೂಡುಬಿದಿರೆಯ ಆಳ್ವಾಸ್ ಕಾಲೇಜು ಒಟ್ಟು ೩೨ ರ್ಯಾಂಕ್ಗಳನ್ನು ಗಳಿಸಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸತತ ೧೦ ವರ್ಷಗಳಿಂದ ಅತೀ ಹೆಚ್ಚು ರ್ಯಾಂಕ್ ಗಳಿಸಿದ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪದವಿ, ಸ್ನಾತಕೋತ್ತರ ಪದವಿ, ಬಿ.ಎಡ್ ಹಾಗೂ ಬಿ.ಪಿಎಡ್ ಫಲಿತಾಂಶಗಳು ಪ್ರಕಟಗೊಂಡಿವೆ. ಒಟ್ಟು ೩೨ ರ್ಯಾಂಕ್ಗಳಲ್ಲಿ ೧೪ ಪ್ರಥಮ, ೫ ದ್ವಿತೀಯ, ೬ ತೃತೀಯ, ೧ ಐದನೇ ರ್ಯಾಂಕ್, ೨ ಏಳನೇ ರ್ಯಾಂಕ್, ೨ ಎಂಟನೇ ರ್ಯಾಂಕ್, ೨ ಹತ್ತನೇ ರ್ಯಾಂಕ್ ಬಂದಿವೆ.
ಪ್ರಥಮ ರ್ಯಾಂಕ್: ಬಿಎಸ್ಸಿ ನಮಿತಾ ವಿ., ಬಿಎಸ್ಡಬ್ಲ್ಯೂನ ಸನಿಕಾ ಎಸ್.ಕುಮಾರ್, ಬಿವಿಎನ ಸಾಕ್ಷಿ ಸಿ.ಎ., ಬಿಪಿಎಡ್ನ ಶ್ರೇಯಾ ಕೆ.ಎಚ್, ಎಂಕಾಂ ಐಬಿಎಮ್ನ ಬಾನವಿ ಎಚ್ವಿ, ಎಂಎಸ್ಸಿ ಅನಾಲಿಟಿಕಲ್ ಕೆಮಿಸ್ಟ್ರಿಯ ಆತಿಯಾ ಆರ್ ವೆರ್ಣೇಕರ್, ಎಂಎ ಎಕನಾಮಿಕ್ಸ್ನ ಟೋನ್ಟೊನ್, ಎಂಎಸ್ಡಬ್ಲ್ಯೂನ ಶರಣ್ಯ ರಾವ್ ಎಚ್., ಏಂಎಸ್ಸಿ ಎಫ್ಎಸ್ಎನ್ನ ಜೇಸ್ನಾ ವಿಜಯನ್, ಎಂಎಸ್ಸಿ ಝೂಆಲಜಿಯ ಆಡಿನಾ, ಎಂಎಸ್ಸಿ ಸೈಕಾಲಜಿಯ ಕಾವ್ಯಶ್ರೀ, ಎಂಎಸ್ಸಿ ಬಯೋಟೆಕ್ನ ಅಮೃತಾ ಅರವಿಂದ್, ಪಿಜಿಡಿಬಿಎಮ್ನ ಜಯಲಕ್ಷ್ಮಿ ಜಿ. (೭೪.೨೦%), ಎಂವಿಎನ ಮಾನಸ ಸಿ. ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ದ್ವಿತೀಯ ರ್ಯಾಂಕ್: ಬಿಎಸ್ಸಿ(ಎಫ್ಎನ್ಡಿ)ಯ ಶಿಮ್ರಾಗ್ ಜುಬೇದಾ ಫೈಜಲ್, ಬಿ.ಎ.ನ ಪ್ರಣವ್, ಬಿವಿಎನ ಮಂಜುನಾಥ್ ಪಿ.ಎ.(೮೩.೧೫%), ಎಂಎಸ್ಡಬ್ಲ್ಯೂನ ಶ್ರುತಿ ಜಾನ್, ಪಿಜಿಡಿಬಿಎಂನ ಸೂರ್ಯ ನಾರಾಯಣ್ ಭಟ್ಟಾ
ತೃತೀಯ ರ್ಯಾಂಕ್: ಬಿಸಿಎನ ಲಾವಣ್ಯ, ಬಿಎ ಎಚ್ಆರ್ಡಿಯ ಸರ್ವಮಂಗಳಾ ಎಸ್ ಬಣಗಾರ್, ಬಿಎಸ್ಸಿಯ ವಿ.ಅನುಷಾ ಕಾಮತ್, ಬಿವಿಎನ ವಿಷ್ಣುಪ್ರಶಾಂತ್ ಬಿ.ಎಂ, ಬಿಎಡ್ನ ಸಂಜನಾ ಪಡಿವಾಳ್ ಪಿಜಿಡಿಬಿಎಂನ ಉಲ್ಲಾಸ್ ಎನ್.ವಿ, ಐದನೇ ರ್ಯಾಂಕ್: ಬಿಬಿಎನ ಶ್ರೇಯಾ ಕೆ. ಶೆಟ್ಟಿ, ಏಳನೇ ರ್ಯಾಂಕ್: ಬಿಬಿಎನ ಶ್ರೀಲಕ್ಷ್ಮಿ, ಬಿಕಾಂನ ಕುಸುಮಾ ಡಿಆರ್, ಎಂಟನೇ ರ್ಯಾಂಕ್: ಬಿಬಿಎನ ಕೀರ್ತಿ ಎಸ್, ಬಿಎನ ಪವಿತ್ರಾ ತೇಜ್, ಹತ್ತನೇ ರ್ಯಾಂಕ್: ಬಿಬಿಎನ ಓಂಕಾರ್ ಹೆಗ್ಡೆ, ಬಿಕಾಂನ ಜಸ್ಟಿನ್ ಎಸ್ ಸಾಧಕ ವಿದ್ಯಾರ್ಥಿಗಳಾಗಿದ್ದಾರೆ ಎಂದು ಮೋಹನ ಆಳ್ವ ತಿಳಿಸಿದ್ದಾರೆ.
ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.