ಮಂಗಳೂರು ವಿದ್ಯಾರ್ಥಿನಿಯ ಹೇಳಿಕೆ ವೆಬ್‌ಸೈಟ್‌ನಲ್ಲಿ ದಾಖಲಿಸಿದ ವಿಶ್ವಸಂಸ್ಥೆ

ಮಂಗಳೂರು, ಎ.೩- ವಿಶ್ವಸಂಸ್ಥೆಯ ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಸಮಿತಿ (ಸಿಆರ್‌ಪಿಡಿ) ಹಮ್ಮಿಕೊಂಡಿದ್ದ ಚರ್ಚೆಯಲ್ಲಿ ಮಂಗಳೂರಿನ ವಿದ್ಯಾರ್ಥಿನಿ ಪ್ರೀತಿ ಲೋಲಾಕ್ಷಿ ನಾವವೇಣಿ ಮಂಡಿಸಿದ ಹೇಳಿಕೆಯನ್ನು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಉನ್ನತ ಆಯುಕ್ತರ ಕಚೇರಿ ತನ್ನ ವೆಬ್ ಸೈಟ್ ನಲ್ಲಿ ದಾಖಲಿಸಿದೆ.

ಮಾ.22ರಂದು ಸಿಆರ್‌ಪಿಡಿ ವಿಕಲಾಂಗರ ಹಕ್ಕುಗಳ ಕುರಿತು ಸಮಿತಿ ಹಮ್ಮಿಕೊಂಡ ಚರ್ಚೆಯಲ್ಲಿ ‘ವಿಕಲಾಂಗ ವ್ಯಕ್ತಿಗಳ ಕೆಲಸ ಮತ್ತು ಉದ್ಯೋಗ’ ಬಗ್ಗೆ ಸಂಶೋಧಕ ಅಮಿತ್ ಆನಂದ್‌ರ ಹೇಳಿಕೆಯನ್ನು ಪ್ರಕಟಿಸಲಾಗಿದೆ ಮತ್ತು ಮಾನವ ಹಕ್ಕುಗಳ ಉನ್ನತ ಆಯುಕ್ತರ ಕಚೇರಿ ಯಲ್ಲಿ ಲಗತ್ತಿಸಲಾದ ವೆಬ್‌ಸೈಟ್(OHCHR)ನಲ್ಲಿ ಪ್ರೀತಿ ಲೋಲಕ್ಷ ನಾಗವೇಯವರ ಹೇಳಿಕೆಯನ್ನು ದಾಖಲಿಸಿದೆ. ನಾಗವೇ ಮತ್ತು ಅಮಿತ್ ಆನಂದ್ ಇಬ್ಬರೂ ಲ್ಯಾಂಕಸ್ಟರ್‌ನಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ. ವಿಶ್ವಮಂಗಲ ಶಾಲೆ ಮತ್ತು ಮಂಗಳೂರಿನ ಸಂತ ಅಲೋಶಿಯಸ್ ಪಿ.ಯು. ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾಗಿರುವ ಪ್ರೀತಿ ಲೋಲಾಕ್ಷ ನಾಗವೇಣಿ ನಾಗರಿಕ ಹಕ್ಕುಗಳ ಹೋರಾಟಗಾರ ಲೋಲಾಕ್ಷಯವರ ಪುತ್ರಿ. ಈ ಚರ್ಚೆಯ ಉದ್ದೇಶವು ವಿಕಲಾಂಗ ವ್ಯಕ್ತಿಗಳ ಕೆಲಸ ಮತ್ತು ಉದ್ಯೋಗದ ಹಕ್ಕುಗಳ ಬಗ್ಗೆ ಸಲಹೆ ಮಾರ್ಗದರ್ಶನ ನೀಡುವುದಾಗಿದೆ ಎಂದು ಪ್ರಕಟನೆ ತಿಳಿಸಿದೆ.