ಮಂಗಳೂರು ಫಿಶ್ ಕರ್ರಿ

ಬೇಕಾಗುವ ಸಾಮಗ್ರಿಗಳು

*ಕ್ಲಾಟ್ಯಾಗ್ ಮೀನು – ೧/೨ ಕೆ.ಜಿ
*ಟೊಮೆಟೋ – ೧
*ಈರುಳ್ಳಿ – ೧
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೧ ಚಮಚ
*ತೆಂಗಿನಕಾಯಿ ತುರಿ – ೧/೨ ಕಪ್
*ಅರಿಶಿಣ – ೧/೨ ಚಮಚ
*ಧನಿಯಾ ಪುಡಿ – ೧ ಚಮಚ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ಚಕ್ಕೆ – ೩
*ಲವಂಗ – ೨
*ಹುಣಸೆಹಣ್ಣು – ಸ್ವಲ್ಪ
*ಅಚ್ಚಖಾರದ ಪುಡಿ – ೨ ಚಮಚ
*ಉಪ್ಪು – ರುಚಿಗೆ ತಕ್ಕಷ್ಟು
*ಎಣ್ಣೆ – ೧೫೦ ಮಿ.ಲೀ
*ನೀರು – ಅಳತೆಗೆ

ಮಾಡುವ ವಿಧಾನ :

ಬೌಲ್‌ಗೆ ತೆಂಗಿನಕಾಯಿ ತುರಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಚಕ್ಕೆ, ಲವಂಗ, ಕೊತ್ತಂಬರಿ ಸೊಪ್ಪು, ಸಣ್ಣಗೆ ಹೆಚ್ಚಿದ ಟೊಮೆಟೋ, ಹುಣಸೇಹಣ್ಣು, ಬೆಳ್ಳುಳ್ಳಿ, ಧನಿಯಾ ಪುಡಿ, ಅಚ್ಚಖಾರದ ಪುಡಿ ಹಾಕಿ, ನೀರು ಸೇರಿಸಿ ರುಬ್ಬಿಕೊಳ್ಳಿ. ಪ್ಯಾನ್‌ಗೆ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಅರಿಶಿಣ, ರುಬ್ಬಿದ ಮಸಾಲೆ, ಅಳತೆಗೆ ತಕ್ಕಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಮೀನು ಹಾಕಿ. ಮುಚ್ಚಳ ಮುಚ್ಚಿ ಬೇಯಿಸಿ ತೆಗೆದರೆ ಮಂಗಳೂರು ಫಿಶ್ ಕರ್ರಿ ರೆಡಿ.