ಮಂಗಳೂರು – ಪೂನಾ: ನಾನ್ ಎಸಿ. ಸ್ಲೀಪರ್ ಬಸ್ ಸೌಲಭ್ಯ

ಮಂಗಳೂರು, ಅ.೨೮-ಕೆಎಸ್‌ಆರ‍್ಟಿಸಿ ಮಂಗಳೂರು ವಿಭಾಗದ ಬಸ್ಸು ನಿಲ್ದಾಣದಿಂದ ಪೂನಾಗೆ ಸಾರ್ವಜನಿಕರ ಬೇಡಿಕೆಗನುಗುಣವಾಗಿ ನಾನ್ ಎ.ಸಿ. ಸ್ಲೀಪರ್ ವಾಹನಗಳೊಂದಿಗೆ ಸಾರಿಗೆ ಸೌಲಭ್ಯವನ್ನು ಅಕ್ಟೋಬರ್ ೨೬ ರಿಂದ ಪುನ: ಆರಂಭಿಸಲಾಗಿದೆ.
ಮಂಗಳೂರಿನಿಂದ ನಾನ್ ಎಸಿ. ಸ್ಲೀಪರ್ ಬಸ್ ಸಂಜೆ ೪ ಗಂಟೆಗೆ ಹೊರಟು ಸುರತ್ಕಲ್, ಮೂಲ್ಕಿ, ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲಾ, ಬೆಳಗಾವಿ, ಸತಾರ ಮೂಲಕ ಪೂನಾಕ್ಕೆ ಬೆಳಿಗ್ಗೆ ೬ ಗಂಟೆಗೆ ತಲುಪಲಿದೆ. ಪೂನಾದಿಂದ ಸಂಜೆ ೬.೩೦ ಕ್ಕೆ ಸತಾರ, ಬೆಳಗಾವಿ, ಅಂಕೋಲಾ, ಭಟ್ಕಳ, ಕುಂದಾಪುರ, ಉಡುಪಿ, ಪಡುಬಿದ್ರಿ, ಮೂಲ್ಕಿ, ಸುರತ್ಕಲ್ ಮೂಲಕ ಮಂಗಳೂರಿಗೆ ಬೆಳಿಗ್ಗೆ ೭ ಗಂಟೆಗೆ ತಲುಪಲಿದೆ. ಪ್ರಯಾಣ ದರ ರೂ. ೧,೫೦೦.
ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದಾಗಿ ನಿಗಮದ ಎಸ್‌ಒಪಿ ನಿರ್ದೇಶನಗಳಂತೆ ಪ್ರಯಾಣಿಸಲು ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಮುಂಗಡ ಟಿಕೇಟು ಬುಕ್ಕಿಂಗ್ ವ್ಯವಸ್ಥೆಗಾಗಿ ಆನ್‌ಲೈನ್ ನಲ್ಲಿ <ತಿತಿತಿ.ಞ?ಡಿಣಛಿ.iಟಿ> ಅಥವಾ ಹತ್ತಿರದ ರಿಸರ್ವೇಶನ್ ಕೌಂಟರ‍್ನ್ನು ಸಂಪರ್ಕಿಸಬಹುದು ಎಂದು ಕೆಎಸ್‌ಆರ‍್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.