ಮಂಗಳೂರು ನಾಡಕಛೇರಿ ಯಲ್ಲಿ ಕಲ್ಯಾಣ ಕರ್ನಾಟಕ ಧ್ವಜಾರೋಹಣ


ಸಂಜೆವಾಣಿ ವಾರ್ತೆ
ಕುಕನೂರು,ಸೆ.19- ತಾಲೂಕು ಮಂಗಳೂರು ಗ್ರಾಮದ ನಾಡ ತಹ ಸೀಲ್ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಾರಂಭ ಜರಗಿತು . ನಡ ಪ್ರಸುಂದರ್ ಬಸವರಾಜ್ ಕ್ಯಾತನಗೌಡರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡುತ್ತಿದೆ . ವಿಭಾಗದ ವಿದ್ಯಾರ್ಥಿಗಳು  ಸರ್ಕಾರಿ ಸವಲತ್ತುಗಳನ್ನು ಪಡೆದು ಸ್ವಾವಲಂಬಿಗಳಾಗಲು ಪ್ರಯತ್ನಿಸಬೇಕೆಂದು ಸಲಹೆ . ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಲ್ಯಾಣಿ ಕರ್ನಾಟಕ ಭಾಗದ ಅನೇಕ ಮಹನಿಯರ ಪಾತ್ರ ಬಹುಮುಖ್ಯವಾಗಿದೆ . ಸ್ವತಂತ್ರದ ಸವಿನೆನಪುಗಳನ್ನು ಎಲ್ಲರೂ ಮೆಲುಕು ಹಾಕುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಕೊಡುಗೆಗಳನ್ನು ನೀಡಲು ಪ್ರಯತ್ನಿಸಲು ಸಲಹೆ ನೀಡಿದರು . ಈ ಸಂದರ್ಭದಲ್ಲಿ ಕಚೇರಿಯ ಸಿಬ್ಬಂದಿ ಹಾಜರಿದ್ದರು .

Attachments area