ಮಂಗಳೂರು ಕರಾರಸಾ ನಿಗಮದಿಂದ ಮಂತ್ರಾಲಯಕ್ಕೆ ಬಸ್ ಆರಂಭ

ಶಿವಮೊಗ್ಗ, ಜನವರಿ- 11: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗದಿಂದ ಜನವರಿ 14 ರಂದು ಮಂಗಳೂರು- ಉಡುಪಿ-ಮಂತ್ರಾಲಯ ನಾನ್ ಎಸಿ ಸ್ಲೀಪರ್ ಬಸ್ ಸೌಲಭ್ಯವನ್ನು ಆರಂಭಿಸುತ್ತಿದೆ.ಈ ಬಸ್ ಮಂಗಳೂರಿನಿಂದ ಸಂಜೆ 3.30ಗೆ ಹೊರಟು ಉಡುಪಿ-ಕುಂದಾಪುರ-ಹಾಲಾಡಿ-ಸಿದ್ಧಾಪುರ-ಮಾಸ್ತಿಕಟ್ಟೆ-ತೀರ್ಥಹಳ್ಳಿ-ಶಿವಮೊಗ್ಗಕ್ಕೆ ರಾತ್ರಿ 9.15ಕ್ಕೆ ತಲುಪಿ 9.45ಕ್ಕೆ ಹೊರಟು ಚನ್ನಗಿರಿ -ಹೊಳಲ್ಕರೆ-ಚಿತ್ರದುರ್ಗ-ಚಳ್ಳೆಕೆರೆ-ರಾಂಪುರ-ಬಳ್ಳಾರಿ-ಅಲೂರು-ಅದೋನಿ-ಮಾಧವರA ಮಾರ್ಗವಾಗಿ ಮಂತ್ರಾಲಯಕ್ಕೆ ಬೆಳಗ್ಗೆ 6.20ಕ್ಕೆ ತಲುಪುವುದು.  ಹಾಗೆಯೇ ಮಂತ್ರಾಲಯದಿಂದ ಮರು ಪ್ರಯಾಣ ಸಂಜೆ 5.30ಕ್ಕೆ ಹೊರಟು ಮಂಗಳೂರಿಗೆ ಬೆಳಗ್ಗೆ 8.40ಕ್ಕೆ ತಲುಪುವುದು.  ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಈ ಸಾರಿಗೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರಾರಸಾಸಂ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.