ಮಂಗಳೂರಿನಲ್ಲಿ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನ


ಸಂಜೆವಾಣಿವಾರ್ತೆ
ಕೊಪ್ಜಳ, ಸೆ.19- ಜಿಲ್ಲೆಯಲ್ಲಿ ಕುಷ್ಠರೋಗವನ್ನು ರೋಗವನ್ನು ಪ್ರಾರಂಬಿಕ ಹಂತದಲ್ಲಿ ಪತ್ತೆಹಚ್ಚಿ ಚಿಕಿತ್ಸೆ ನೀಡಿದಲ್ಲಿ ಅಂಗಾಂಗ ವೈಕಲ್ಯತೆ ತಡೆಯಬಹುದಾಗಿದ್ದು ಈ ನಿಟ್ಟಿನಲ್ಲಿ ಇಲಾಖೆಯೊಂದಿಗೆ ಸಹಕರಿಸಿ ಕುಷ್ಠರೋಗ ನಿರ್ಮೂಲನೆಗೆ ಸಹಕರಿಸಲು ಅಮರೇಶ ಆಪ್ತಸಮಾಲೋಚಕರು ಸಾರ್ವಜನಿಕರಿಗೆ ಕರೆ ನೀಡಿದರು.
ಕುಮಾರಿ ಅರ್ಪಿತಾ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿಯವರು ಮಾತನಾಡಿ ದೇಹದ ಚರ್ಮದ  ಮೇಲಿನ ತಿಳಿ,ಬಿಳಿ, ತಾಮ್ರ ಬಣ್ಣದ ಮಚ್ಚೆ, ಕಣ್ಣಿನ ರೆಪ್ಪೆ ಮುಚ್ಚುವಲ್ಲಿ ತೊಂದರೆ, ಕೈಕಾಲುಗಳಲ್ಲಿನ ಬಹುದಿನದ ನೊವಿಲ್ಲದ ಗಾಯಗಳು,‌ ನಡೆಯುವಾಗ ಕಾಲು ಎಳೆಯುವದು, ಅಂಗೈ /ಪಾದಗಳಲ್ಲಿ ಶೀತ & ಬಿಸಿ ಸಂವೆದನೆ ನಷ್ಟವಾಗಿರುವದು, ವಸ್ತುಗಳನ್ನು ಹಿಡಿಯಲು & ಪಾದರಕ್ಷೆ ತೊಡಲು ಬಲಹಿನತೆ ಇವುಗಳು ಕುಷ್ಠರೋಗದ ಲಕ್ಷಣಗಳಾಗಿದ್ದು ಇಂತಹ ಲಕ್ಷಣಗಳು ಕಂಡುಬಂದಲ್ಲಿ ಕೂಡಲೆ ಆರೋಗ್ಯ ಕೇಂದ್ರಕ್ಕೆ ಭೆಟಿ ನೀಡಿ ತಪಾಸಣೆಗೆ ಒಳಗಾಗಲು & ಸಲಹೆ ನೀಡಿದರು. ಪ್ರಸ್ತುತ ನಡೆಯುತ್ತಿರುವ ಅಭಿಯಾನದಲ್ಲಿ ಮನೆ ಮನೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು & ಆಶಾ ಕಾರ್ಯಕರ್ತೆಯರು ಸ್ವಯಂ ಸೇವಕರು ಭೇಟಿ ನೀಡಿ ಪರೀಕ್ಷೆ ಮಾಡುತಿದ್ದು ಎಲ್ಲರೂ ಸಹಕರಿಸಿ ಕಾರ್ಯಕ್ರಮ ಯಶಸ್ವಿ ಮಾಡಿ ಕುಷ್ಠ ಮುಕ್ತ ಭಾರತ ನಿರ್ಮಿಸೋಣ ಎಂದರು.
ಆಶಾ ಕಾರ್ಯಕರ್ತೆಯರು ಪ್ರತಿದಿನ ಕನಿಷ್ಠ 20 ಮನೆಗಳಿಗೆ ಭೇಟಿ ಮಾಡಿ ಪರೀಕ್ಷೆ ಮಾಡಿ ಸಂಶಾಯಾಸ್ಪದ ಲಕ್ಷಣಗಳಿದ್ದಲ್ಲಿ ವೈದ್ಯರಿಂದ ತಪಾಸಣೆಗೊಳಪಡಿಸಿ ಚಿಕಿತ್ಸೆ ನೀಡಲಾಗುವದು ಎಲ್ಲರೂ ಇದರ ಪ್ರಯೋಜನ ಪಡೆಯಬೇಕು ಎಂದು ವೀರಭದ್ರಪ್ರ ಆರೋಗ್ಯ ನೀರಿಕ್ಷಣಾ ಅಧಿಕಾರಿಗಳು ಸಾವಜನಿಕರಿಗೆ ಕರೆ  ನೀಡಿದರು.