ಮಂಗಳೂರಲ್ಲಿ ಸಂಭ್ರಮದ ರಂಜಾನ್ ಆಚರಣೆ


ಸಂಜೆವಾಣಿ ವಾರ್ತೆ
ಕುಕನೂರ:ಏ.23- ತಾಲೂಕಿನ ಮಂಗಳೂರು ಗ್ರಾಮದ ಈದ್ಗಾ ಮೈದಾನದಲ್ಲಿ ನೂರಾರು ಮುಸ್ಲಿಂ ಬಾಂಧವರು ನಮಾಜ್ ಮಾಡುವ ಮುಖಾಂತರ ರಂಜಾನ್ ಆಚರಣೆ ಮಾಡಿದರು ಶಂಶುದ್ದಿನ ಖಾಜಿ ಮಾತನಾಡಿ ಸುಮಾರು ಒಂದು ತಿಂಗಳಿನಿಂದ ನಿರಂತರವಾಗಿ ನಮ್ಮ ಸಮಾಜದ ಎಲ್ಲಾ ಕುಲಬಾಂಧವರು ದಿನಾಲು ರಂಜಾನ್ ಉಪವಾಸವನ್ನು ಅತ್ಯಂತ ಕಠಿಣ ಉಪವಾಸ ಮಾಡುವ ಮೂಲಕ ಪ್ರಾರ್ಥನೆ ಮಾಡುತ್ತಿದ್ದರು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಹಿರಿಯರಾದ ಶ್ರೀ ಅಬ್ದುಲಸಾಬ ಕಾಲಿಮಿರ್ಚಿ ರಾಜಾ ಸಾಬ್ ನೇವಣ್ಣಕ್ಕಿ, ಬಾಬುಸಾಬ ಬೆಣಕಲ್, ಖಾಜಾಸಾಬ, ನೂರಭಾಷ, ಶ್ಯಾಮಿದಅಲಿ , ಗುಡಿ ಹಿಂದಲ್ ಮಾಬುಸಾಬ ,ಕಲ್ಲೂರ ನಜೀರಸಾಬ, ಬೆಣಕಲ್ ಶ್ಯಾಮಿದಅಲಿ, ಬೆಣಕಲ್ ಮುದಕಪ್ಪ, ನೂರಭಾಷ, ಮಾಬುಸಾಬ, ಗೋಡೆಕಾರ ಬಾಬು, ವಣಗೇರಿ ಮೈಬುಸಾಬ, ಗುಡಿಹಿಂದಲ್, ಖಾಜಾಸಾಬ, ನೂರಭಾಷ ಹಾಗೂ ಮುದ್ದು ಮಕ್ಕಳು ಹಾಜರಿದ್ದರು.