ಮಂಗಳವಾಧ್ಯ ಕಲಾವಿದರ ಹಕ್ಕೊತ್ತಾಯಕ್ಕಾಗಿ ಮನವಿ

ಹಗರಿಬೊಮ್ಮನಹಳ್ಳಿ :ಜ.13 ಎಲ್ಲಾ ಸಮುದಾಯಗಳ ಮತ್ತು ಗ್ರಾಮ, ನಗರದ ಶುಭ ಸಮಾರಂಭಗಳಿಗೆ ನಮ್ಮ ಮಂಗಳವಾಧ್ಯ ಕಲೆ ಅಗತ್ಯವಾಗಿ ಬೇಕಾಗಿದ್ದು ಅದು ಎಲ್ಲರಿಗೂ ಶುಭವನ್ನು ತರಲಿದೆ. ಆದರೆ ನಾವುಮಾತ್ರ ಯಾರಿಗೂ ಬೇಡವಾಗಿದ್ದೇವೆ ಎಂದು ಸಿಐಟಿಯುನ ಎಸ್.ಜಗನ್ನಾಥ ಹೇಳಿದರು
ಪಟ್ಟಣದ ತಹಸೀಲ್ದಾರ್ ಕಛೇರಿ ಬಳಿ ಸೋಮವಾರ ಮಂಗಳವಾಧ್ಯ ಕಲಾವಿದರ ಹಕ್ಕೊತ್ತಾಯಕ್ಕಾಗಿ ಮನವಿ ಸಲ್ಲಿಸಿ ಅವರು ಮಾತನಾಡಿ ಮದುವೆ, ಮುಂಜಿ, ಹುಟ್ಟುಹಬ್ಬ, ದೇವಸ್ಥಾನಗಳ ಪೂಜೆ, ಜಾತ್ರೆಗಳು, ರಾಜಕಾರಣಿಗಳ ಆಗಮನ ಸೇರಿದಂತೆ ಶವಯಾತ್ರೆಗೂಸಹ ಮಂಗಳವಾಧ್ಯ ಮೊಳಗಲೇಬೇಕು. ಆದರೆ ಸಾವಿರಾರು ವರ್ಷಗಳಿಂದಷ್ಟೇ ಏಕೆ ಅನಾದಿಕಾಲದ ಮಂಗಳವಾಧ್ಯ ಪರಿಕರ ತಯಾರಿಕೆಯಿಂದ ಹಿಡಿದು ಅದನ್ನು ಅಭಿವೃದ್ದಿ ಪಡಿಸುವುದರಿಂದ ಎಲ್ಲರಿಗೂ ಸಂತೋಷ ಉಂಟುಮಾಡುವ ಸಂಗೀತವನ್ನು ನುಡಿಸಿ ಅಲ್ಲಿಂದ ಇಲ್ಲಿಯವರೆಗೆ ನಮ್ಮ ಜೀವನವನ್ನೇ ಉಸಿರಾಗಿಸಿ ಸಮಾಜ ಸೇವೆಯಲ್ಲಿ ತೊಡಗಿದ್ದೇವೆ.
ಆದರೆ ಸಮಾಜ ನಮ್ಮನ್ನು ಅಸ್ಪೃಷ್ಯರು, ಕೀಳು ಹಾಗೂ ಬಹಿಷ್ಕೃತರಂತೆ ನಡೆಸಿಕೊಳ್ಳುತ್ತಾ ಬಂದಿದೆ. ಸಮಾರಂಭಗಳಲ್ಲಿ ಕೊಡುವ ವೇತನವು ಈ ಬೆಲೆಏರಿಕೆಯ ಕಾಲದಲ್ಲಿ ನಮ್ಮ ಕುಟುಂಬನಿರ್ವಾಣೆಗೆ ಯಾವುದಕ್ಕೂ ಸಾಲುತ್ತಿಲ್ಲ. ಸಾಮಾಜಿಕ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆಂದು ಹೇಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಕಲೆ ಮತ್ತು ಕಲಾವಿದರ ಕುಟುಂಬಗಳ ಕುರಿತು ಸ್ವಲ್ಪವೂ ಕಾಳಜಿ ತೆಗೆದುಕೊಳ್ಳುತ್ತಿಲ್ಲ. ನಮ್ಮ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹವಿಲ್ಲದಂತಾಗಿದೆ.
ಮಂಗಳವಾದ್ಯ ಕಲಾವಿದರಿಗೆ ಕನಿಷ್ಠ 3000ರೂಗಳ ಮಾಶಾಸನ ದೊರೆಯಬೇಕು. ಮಂಗಳವಾಧ್ಯ ಪರಿಕರಗಳ ಖರೀದಿಗಾಗಿ ಶೇಕಡ 75 ರಂತೆ ಸಬ್ಸಿಡಿಸಹಿತ ಬಡ್ಡಿರಹಿತ ಸಾಲಸೌಲಭ್ಯ ಒದಗಿಸಬೇಕು. ಕಲಾವಿದರನ್ನು ಪ್ರೋತ್ಸಾಹಿಸಲು ಜಿಲ್ಲೆಗೊಂದು ಪ್ರಶಸ್ತಿ ನಿಗದಿಮಾಡಬೇಕು. ಕಲಾವಿದರ ಮಕ್ಕಳಿಗೆ ವಸತಿ ಸಹಿತ ಉಚಿತ ಕಲಾಭ್ಯಾಸ ಶಿಭಿರ ಏರ್ಪಡಿಸಬೇಕು. ನಮ್ಮ ಕುಟುಂಬಗಳಿಗೆ ಆರೋಗ್ಯ ಕಾರ್ಡ್ ಮತ್ತು ರೇಷನ್ ಕಾರ್ಡ್ ಒದಗಿಸಬೇಕು. ಮಂಗಳವಾಧ್ಯ ಕಲಾವಿದರ ನಿಗಮಸ್ಥಾಪನೆಗಾಗಿ ಸರ್ಕಾರಗಳನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಂಗಳವಾಧ್ಯ ಕಲಾವಿದರ ಸಂಘದ ಲಕ್ಷ್ಮಣ, ಪ್ರಹ್ಲಾದ, ನಾಗರಾಜ, ಅಶೋಕ ಮತ್ತಿತರರು ಇದ.