ಮಂಗಳಮುಖಿ ಗೆಲುವು

ಹೊಸಪೇಟೆ ಡಿ 30 : ತಾಲೂಕಿನ ಕಲ್ಲಹಳ್ಳಿ ಗ್ರಾಪಂಯ ರಾಜಾಪುರದ ಮತ ಕ್ಷೇತ್ರದಿಂದ ಸುಧಾ ಎಂಬ ಮಂಗಳಮುಖಿ 491 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಒಟ್ಟು 622 ಮತ ಗಳಿಸಿರುವ ಸುಧಾ ಅವರು ಈ ಗ್ರಾಪಂ ನಲ್ಲಿ ಇದೆ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ವಿಶೇಷವಾಗಿದೆ. ಈ ವರೆಗೆ ಈ ಕಲ್ಲಹಳ್ಳಿ ಗ್ರಾಪಂನಲ್ಲಿ ಅವಿರೋಧ ಆಯ್ಕೆ ನಡೆಯುತ್ತಿತ್ತು. ಚುನಾವಣೆ ನಡೆದಿದ್ದರಿಂದ ಇಂತಹವರ ಆಯ್ಕೆಗೆ ಸಾಧ್ಯವಾಗಿದೆ.ರಾಜಾಪುರದ 3 ಮತಕ್ಷೇತ್ರಗಳಿಗೆ 6 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.