ಮಂಗಳಮುಖಿಯರಿಗೆ ಹಾಗೂ ವಿಕಲಚೇತನ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ವಿಜಯಪುರ, ಜೂ.9-ಈ ಕೋವಿಡ್ ಮಹಾಮಾರಿಯು ಉಲ್ಬಣಗೊಂಡ ಕಾರಣ ರಾಜ್ಯ ಸರಕಾರ ಲಾಕಡೌನ್ ಘೋಷಣೆ ಮಾಡಿದ ನಂತರ ನಗರದ ಮಂಗಳಮುಖಿಯರು ಆಹಾರ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿರುವದನ್ನು ಶ್ರೀಮತಿ ವಿಜಯಲಕ್ಷ್ಮಿ ಸರ್ವೊತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆಯ ವತಿಯಿಂದ ಮಂಗಳಮುಖಿಯರಿಗೆ ಹಾಗೂ ವಿಕಲಚೇತನ ಕುಟುಂಬಗಳಿಗೆ ಕೋವಿಡ್ ಮುನ್ನೆಚ್ಚರಿಕೆ ಕೈಗೊಂಡು ಆಹಾರ ಧಾನ್ಯ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಪ್ರಶಾಂತ ದೇಶಪಾಂಡೆ ಅವರು ಮಾತನಾಡಿ ಈ ರಾಷ್ಟ್ರಾದ್ಯಂತ ಹಬ್ಬಿರುವ ಈ ಕೊರೋನಾ ಮಹಾಮಾರಿಯಿಂದ ಬಡ, ಕೂಲಿ ಕಾರ್ಮಿಕರು, ಮಂಗಳಮುಖಿಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ತಮ್ಮ ಜೀವನವನ್ನು ನಡೆಸುತ್ತಿರುವದು ಬಹಳ ಸಮಸ್ಯೆಗಳನ್ನು ತಂದೊಡ್ಡಿದೆ ಎಂದರು.
ಇದರ ಮದ್ಯೆ ಮಂಗಳಮುಖಿಯರು ಬಿಕ್ಷಾಟಣೆ ಮಾಡಿ ಜೀವನ ನಡೆಸುವವರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಅದಕ್ಕಾಗಿ ಇವರಿಗೆ ಸರಕಾರವು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಸಹಾಯ ಮಾಡಬೇಕು. ಅದೇ ರೀತಿ ಇಂತಹ ವರ್ಗದವರಿಗೆ ಸಹಾಯ ಮಾಡಲು ಸಂಘ ಸಂಸ್ಥೆಗಳು ಮುಂದಾಗಬೇಕೆಂದು ತಿಳಿಸಿದರು.
ಆಹಾರ ಕಿಟದಲ್ಲಿ 5ಕೇಜಿ ಅಕ್ಕಿ, 2ಕೇಜಿ ತೋಗರಿ ಬೇಳೆ, 2ಕೇಜಿ ಗೋಧಿ ಹಿಟ್ಟು, 2ಕೇಜಿ ಅವಲ್ಲಕ್ಕಿ, ಹಾಗೂ 1ಕೇಜಿಯ ಅಡುಗೆ ಎಣ್ಣೆ ವಿತರಣೆ ಮಾಡಲಾಯಿತು.
ಮೊದಲ ಹಂತದಲ್ಲಿ ಸುಮಾರು 180 ಕೂ ಹೆಚ್ಚು ಕಿಟ್ಟಗಳನ್ನು ತಯಾರಿಸಿ ಜೂನ್ 5 ರಿಂದ 7ರವರೆಗೆ ನಗರದ ಘಂಜ, ಮೀನಾಕ್ಷಿ ಚೌಕ, ಸೋಲಾಪುರ ಬೈಪಾಸ್, ಸಿಂದಗಿ ನಾಕಾದಲ್ಲಿ ವಲಸಿರುವ 100ಕೂ ಅಧಿಕ ಮಂಗಳಮುಖಿಯರಿಗೆ, 50 ವಿಕಲಚೇತನ ಮಕ್ಕಳಿಗೆ ಮತ್ತು 30 ಆಹಾರ ಅಗತ್ಯವಿರುವ ಕುಟುಂಬದವರಿಗೆ ಆಹಾರ ಧಾನ್ಯದ ಕಿಟ್ಟನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಚೀನ ಪಾಟೀಲ್, ಸಾಗರ ಮಂಚಲಕರ, ದಿವ್ಯಂ ಪಂಡಿತ, ಪ್ರಶಾಂತ ಸಾಗರ, ರಂಜೀತ ಸಿಂಗ್ ಪೋತಿವಾಲೇ, ಅಬ್ದುಲ ಅಜೀಜ ಅತ್ತರ, ಅಶ್ವಿ£ ಬುರಾಣಪುರ, ರಶ್ಮಿ ಇಂಡಿ, ಪೂಜಾ ಇಂಡಿ ಈ ಎಲ್ಲಾ ಸದಸ್ಯರು ಬಾಗವಹಿಸಿದರು. ಈ ಕಾರ್ಯಕ್ರಮಕ್ಕೆ ರಾಜ್ಯ, ಹೊರ ರಾಜ್ಯ, ದೇಶ ಮತ್ತು ವಿದೇಶದಿಂದ ಆಸ್ತಕ ಜನರಿಂದ ಪ್ರೋತ್ಸಹ ಪಡೆಯಲಾಯಿತು.
ನವಸ್ಪೂರ್ತಿ ಸಂಘದಿಂದ ಇಸ್ಮಾಯಿಲ್, ಶಬೀರ, ರವಿ ಸದ್ಯಸರು ಉಪಸ್ಥತರಿದು ಮಂಗಳಮುಖಿಯರಾದ ಗೋಪಿ, ಸಹದೇವ ಭಂಜತ್ರಿ ಇದ್ದರು.