ಮಂಗಳಮುಖಿಯರಿಗೆ ಆಹಾರ ಧಾನ್ಯದ ಕಿಟ್‌

ಚಿತ್ರದುರ್ಗ, ಮೇ – 28 ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆವರಣದಲ್ಲಿ  ಡಾ. ಶಿವಮೂರ್ತಿ ಮುರುಘಾ ಶರಣರು ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಮಂಗಳಮುಖಿಯರು, ವಿಕಲಚೇತನರು, ಆಶಾ ಕಾರ್ಯಕರ್ತೆಯರು, ಚಂದ್ರವಳ್ಳಿ ಮತ್ತು ಕೋಟೆಯ ಗೈಡ್ಸ್ಗಳು ಮತ್ತು ರಂಗಕಲಾವಿದರು ಸೇರಿದಂತೆ 110ಜನರಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಿದರು. ಇಂದಿನ ದವಸ ಧಾನ್ಯ ದಾಸೋಹವನ್ನು ವಾಣಿಜ್ಯೋದ್ಯಮಿ ಜೆ.ಎಂ.ಜಯಕುಮಾರ್ ಮತ್ತು ಮಕ್ಕಳು ಚಿತ್ರದುರ್ಗ ಇವರು ವಹಿಸಿಕೊಂಡಿದ್ದರು.ಈ ಸಂದರ್ಭದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕರ‍್ಯದರ್ಶಿ ಎ.ಜೆ.ಪರಮಶಿವಯ್ಯ, ಮಂಗಳಮುಖಿಯರ ಮುಖ್ಯಸ್ಥೆ ಭಾನುಪ್ರಿಯೆ, ವಿಕಲಚೇತನ ಸಂಸ್ಥೆ ಅಧ್ಯಕ್ಷ ಮಾರುತಿ ಟಿ.ಬಿ., ಕೋಟೆ ಮತ್ತು ಚಂದ್ರವಳ್ಳ ಗೈಡ್ಸ್ ಮುಖ್ಯಸ್ಥ ಟಿ.ಬಸವರಾಜಪ್ಪ, ಆಶಾ ಕಾರ್ಯಕರ್ತೆ ಶಿವಲೀಲಾ, ಎನ್. ತಿಪ್ಪಣ್ಣ ಮೊದಲಾದವರಿದ್ದರು.