ಮಂಗಲಾ ಸೋಮನಾಥ ಪಾಟೀಲರಿಗೆ ಗೌರವ ಡಾಕ್ಟರೇಟ್

ಭಾಲ್ಕಿ : ಮಾ.1:ಗ್ರಾಮೀಣ ಭಾಗದಲ್ಲಿ ಶಿಕ್ಷಣ ಮತ್ತು ಸಮಾಜ ಸೇವೆಯನ್ನು ಸಲ್ಲಿಸಿರುವ ಬಾಲ್ಕಿ ತಾಲೂಕಿನ ಬ್ಯಾಲಹಳ್ಳಿ(ಡಬ್ಲೂ) ಗ್ರಾಮದ ನಿವೃತ್ತ ಪದವಿ ಕಾಲೇಜಿನ ಪ್ರಾಧ್ಯಾಪಕಿ ಪ್ರೋ.ಮಂಗಲಾ ಸೋಮನಾಥ ಪಾಟೀಲ ಇವರಿಗೆ ಐ.ಎ.ಓ.ಅಮೇರಿಕಾದ ಅಂತರರಾಷ್ಟ್ರೀಯ ಮಾನವ ಅಭಿವೃಧ್ಧಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ (ಡಾಕ್ಟರ್ ಆಫ್ ಆನರ್ಸ್) ಪದವಿ ಪ್ರದಾನ ಮಾಡಿದೆ ಎಂದು ಉಪ-ಕುಲಪತಿ ಡಾ.ವಿಶ್ವನಾಥ ಚಿಮಕೋಡ್ ತಿಳಿಸಿದ್ದಾರೆ.

ಫೆ.26ರ ರಂದು ಗೋವಾದ ಪಣಜಿಯಲ್ಲಿ ಹಮ್ಮಿಕೊಳ್ಳಲಾದ ಅಚಿವರ್ಸ್ ಅವಾರ್ಡ ಸಮಾರಂಭದಲ್ಲಿ ಗ್ರಾಮೀಣ ಭಾಗದಲ್ಲಿ ಸಮಾಜ ಸೇವೆ ಮಾಡಿದ ಪ್ರೊ. ಸೋಮನಾಥ ಪಾಟೀಲ ಇವರಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮನೋಶಾಸ್ತ್ರಜ್ಞ ಡಾ.ಹರ್ಷಿನಿರಾಧಾಕೃಷ್ಣ, ಕನ್ನಡ ಚಲನ ಚಿತ್ರದ ಖ್ಯಾತ ನಟಿ ಭವ್ಯ, ರಾಷ್ಟ್ರೀಯ ಜಾನಪದ ಗಾಯಕಿ ಡಾ. ಬಿ.ವಿ.ಪದ್ಮಾವತಿ, ಗೋವಾದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಣ್ಣಾ ಮೇಟಿ, ಡಾ.ರಾಜು.ಎಸ್. ಸೇರಿದಂತೆ ಗಣ್ಯಮಾನ್ಯರು ಉಪಸ್ಥಿತರಿದ್ದರು.

ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದ ಮಂಗಲಾ ಪಾಟೀಲ ಹಾಗೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಸೋಮನಾಥ ಪಾಟೀಲರಿಗೆ ಶಿಕ್ಷಣ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಅಂತರ ರಾಷ್ಟ್ರೀಯ ವಿಶ್ವವಿದ್ಯಾಲದವರು ಪ್ರಶಸ್ತಿ ಪ್ರದಾನ ಮಾಡಿದ್ದಕ್ಕಾಗಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು, ಶಾಸಕ ಈಶ್ವರ ಖಂಡ್ರೆ, ವಿಧಾನ ಪರಿಷತ್ ಸದಶ್ಯರಾದ ಶಶೀಲ.ಜಿ.ನಮೋಶಿ, ಅಮರನಾಥ ಪಾಟೀಲ, ಅರೂಣ ಶಾಪೂರ, ಸುರೇಶ ಲೊಖಂಡೆ, ಹಿರಿಯ ಪತ್ರಕರ್ತ ಗಣಪತಿ ಬೋಚರೆ, ಸುಭಾಷ ಖಂಡ್ರೆ ಸೇರಿದಂತೆ ಅವರ ಬಂಧು ಬಾಂಧವರು ಹರ್ಷ ವ್ಯಕ್ತ ಪಡಿಸಿದ್ದಾರೆ.