ಮಂಗಲಗಿ ಶ್ರೀ ಮಠಕ್ಕೆ ಶಶಿಕಲಾ ಟೆಂಗಳಿ ಭೇಟಿ

ಕಾಳಗಿ:ಅ.30: ತಾಲ್ಲೂಕು ಸಮೀಪದ ಮಂಗಲಗಿ ಶಾಂತ ಸೋಮನಾಥ ಶಿವಾಚಾರ್ಯರ ಮಠಕ್ಕೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿಶ್ವನಾಥ ಟೆಂಗಳಿ ಭೇಟಿ ನೀಡಿ ಶ್ರೀಗಳ ಆರ್ಶಿವಾದ ಪಡೆದರು.
ನಂತರ ಶ್ರೀ ಮಠದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಭಾಗವಹಿಸಿ ಮಾತನಾಡಿದರು. ಮಹಿಳಾ ನಿಗಮದ ಆದ್ಯಕ್ಷೆಯಾಗಿ ಶ್ರೀಮಠಕ್ಕೆ ಮೊದಲಬಾರಿ ಬಂದಿರುವೇ ಶ್ರೀಗಳ ದರ್ಶನ ತೆಗೆದುಕೊಂಡು ತುಂಬಾ ಆನಂದವಾಯಿತು. ಮಂಗಲಗಿ ಶಾಂತಸೋಮನಾಥ ಶಿವಾಚಾರ್ಯ ಶೈಕ್ಷಣಿಕ, ಧಾರ್ಮಿಕತೆಗೆ ಈ ಭಾಗದ ಭಕ್ತರಿಗೆ ಮಾರ್ಗದರ್ಶನ ನೀಡುವ ಪವಿತ್ರವಾದ ಸ್ಥಳವಾಗಿದೆ.

ಆಶ್ವಾಸನೆ ಕೊಡಲು ನನ್ನಿಂದಾಗುವುದಿಲ್ಲ. ಹೀಗಾಗಿ ಮುಂಬರುವ ಹಂತದಲ್ಲಿ ನನ್ನ ಕೈಲಾದ ಸಹಾಯವನ್ನು ಶ್ರೀ ಮಠಕ್ಕೆ ಮಾಡತ್ತೇನೆ ಎಂದು ಹೇಳಿದರು.
ವಿಶ್ವನಾಥ ಟೆಂಗಳಿ, ಸಂತೋಷ ಚವ್ಹಾಣ, ಗುಂಡಪ್ಪ ದೇಸಾಯಿ, ಭೀಮರಾವ ದಂಡೊತ್ತಿ, ವಿಠ್ಠಲ ವಿಶ್ವಕರ್ಮ, ನಾಗರಾಜ ಮಾಗಾಂವ, ಜಯರಾಜ ಮುದಿರಾಜ, ಫಕಿರಯ್ಯ ಸ್ಥಾವರಮಠ, ವಿಜಯಕುಮಾರ ತುಮಕುನ್, ಜಗನ್ನಾಥ ಹುಗಾರ ಟೆಂಗಳಿ, ಸೇರಿ ಹಲವಾರಿದ್ದರು.