ಮಂಗನ ಮಡಿಲಲ್ಲಿ ನಾಯಿಮರಿ!

ಕಲಬುರಗಿ , ಅ.30: ತನ್ನ ಮಗುವಿನಂತೆಯೇ ಅಪ್ಪಿಕೊಂಡು ತೋಳಿನಲ್ಲಿ ಇಟ್ಟುಕೊಂಡು ಕಾಪಾಡುತ್ತೆ. ತನ್ನ ಮಗುವಿನಂತೆಯೇ ನಾಯಿ ಮರಿ ಮೇಲೆ ಕೋತಿ ಪ್ರೀತಿ ತೋರಿಸುತ್ತಿತ್ತು. ನಾಯಿ ಮರಿಯೂ ಸಹ ಕೋತಿಯ ಹಿಂದೆ, ಹಿಂದೆಯೇ ಹೋಗುತ್ತಿರುವ ದೃಶ್ಯ ನೆಟ್ಟಿಗರ ಮನಗೆದ್ದಿದೆ.
ಅಫಜಲಪೂರ್ ತಾಲ್ಲೂಕಿನ ಶಿವೂರು ಗ್ರಾಮದಲ್ಲಿ ಇಂತಹದೊಂದು ಅಪರೂಪದ ಘಟನೆ ನಡೆದಿದೆ. ಕಪ್ಪು ಮಂಗವೊಂದು ನಾಯಿ ಮರಿಯನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಓಡಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎಲ್ಲಿಯೇ ಹೋದರೂ ಕೋತಿ ನಾಯಿ ಮರಿಯನ್ನು ಜೊತೆಗಿಟ್ಟುಕೊಂಡೇ ಹೋಗುತ್ತದೆ. ಯಾರಾದರೂ ಹತ್ತಿರಕ್ಕೆ ಬಂದರೆ ನಾಯಿ ಮರಿಯನ್ನು ಎತ್ತಿಕೊಂಡು ಮಂಗ ದೂರ ಓಡಿ ಹೋಗುತ್ತದೆ. ಯಾವುದೇ ಪ್ರತಿರೋಧ ಒಡ್ಡದೇ ಮಂಗನೊಂದಿಗೆ ನಾಯಿ ಮರಿ ಸಹ ಓಡಾಡುತ್ತಿರುವುದು ಅಚ್ಚರಿ ಮೂಡಿಸುತ್ತಿದೆ.