ಮಂಗಗಳ ದಾಳಿ: ಇಬ್ಬರಿಗೆ ಗಾಯ

ಕಲಬುರಗಿ:ಡಿ.25: ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಬಳವಡಗಿ ಗ್ರಾಮದಲ್ಲಿ ಮಂಗಗಳ ಕಡಿತಕ್ಕೆ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಮನೆಯಲ್ಲಿಯೇ ಉಪಚಾರ ಪಡೆಯುತ್ತಿದ್ದಾರೆ.
ಶ್ರೀಮತಿ ಲಕ್ಷ್ಮೀಬಾಯಿ ಗಂಡ ಸಿದ್ದಪ್ಪ, ಶ್ರೀಮತಿ ಅನಿತಾ ಚವ್ಹಾಣ್ ಅವರಿಗೆ ಮಂಗಗಳು ಕಚ್ಚಿದ್ದು, ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್ ಅವರು ಗ್ರಾಮಕ್ಕೆ ತೆರಳಿದರು. ಅಲ್ಲದೇ ಮಂಗಗಳ ಹಾವಳಿ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು.
ಅರಣ್ಯಾಧಿಕಾರಿಗಳು, ಇಬ್ಬರು ಮಹಿಳೆಯರ ಯೋಗಕ್ಷೇಮವನ್ನು ಸಹ ವಿಚಾರಿಸಿದರು. ಅಲ್ಲದೇ ಸರ್ಕಾರದಿಂದ ಸಿಗುವ ಪರಿಹಾರವನ್ನು ಕಲ್ಪಿಸುವುದಾಗಿಯೂ ಈ ಸಂದರ್ಭದಲ್ಲಿ ಅವರು ಸಂತ್ರಸ್ತರಿಗೆ ಭರವಸೆ ನೀಡಿದರು.