
ಬೆಂಗಳೂರು, ಆ.4- ಕೋವಿಡ್ ಆತಂಕದ ನಡುವೆ ಇದೀಗ ಮಂಕಿ ಪಾಕ್ಸ್ ಸೋಂಕಿ ಕಾಣಿಸಿಕೊಳ್ಳುತ್ತಿದ್ದು, ಹೀಗಾಗಿ, ಮೆಜೆಸ್ಟಿಕ್ ಹಾಗೂ ಸಿಟಿ ರೈಲ್ವೆ ನಿಲ್ದಾಣ ಸೇರಿದಂತೆ ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ನಗರಕ್ಕೆ ಬಹುತೇಕರು ಆಗಮಿಸುವ ಮೆಜೆಸ್ಟಿಕ್ ಹಾಗೂ ಸಿಟಿ ರೈಲ್ವೆ ನಿಲ್ದಾಣದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಕೋವಿಡ್ ಸ್ಕ್ರೀನಿಂಗ್ ಜತೆಯಲ್ಲಿ ಚರ್ಮದ ಮಚ್ಚೆಗಳು ಕಂಡು ಬಂದಂತಹ ವ್ಯಕ್ತಿಗಳಿಗೆ ಮಂಕಿಪಾಕ್ಸ್ ಟೆಸ್ಟಿಂಗ್ಗೆ ವ್ಯವಸ್ಥೆ ಮಾಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಬಿಬಿಎಂಪಿ ಆರೋಗ್ಯಾಧಿಕಾರಿಯೊಬ್ಬರು, ಸ್ಕ್ರೀನಿಂಗ್ ವ್ಯವಸ್ಥೆಯ ಜತೆಗೆ ಮಂಕಿಪಾಕ್ಸ್ ಲಕ್ಷಣಗಳಾದ ಮಚ್ಚೆ ಸೇರಿದಂತೆ ಇತರೆ ಲಕ್ಷಣ ಕಂಡು ಬಂದ ಪ್ರಯಾಣಿಕರಿಗೆ ತಪಾಸಣೆ ಮಾಡಲು ಕ್ರಮ ವಹಿಸಲಾಗಿದೆ. ನಗರದಲ್ಲಿ ಕೋವಿಡ್ ನಿಯಂತ್ರಿಸಲು ಟೆಸ್ಟಿಂಗ್ ಹೆಚ್ಚಿಸಲಾಗುತ್ತಿದೆ ಹಾಗೂ ಲಸಿಕೆ ವಿತರಣೆ ಚುರುಕುಗೊಳಿಸಲಾಗುತ್ತಿದೆ ಎಂದರು.
ಏನಿದು ಮಂಕಿಪಾಕ್ಸ್?: ಇದು ವಿರಳಾತಿ ವಿರಳ ರೋಗವಾಗಿದೆ. ಮಂಕಿಪಾಕ್ಸ್ ಎಂಬ ವೈರಸ್ನಿಂದ ಬರುತ್ತದೆ. ಈ ವೈರಸ್ ಕೂಡ ಸ್ಮಾಲ್ ಪಾಕ್ಸ್ನ ಕುಟುಂಬದ್ದೇ ಆಗಿದೆ. ಸ್ಮಾಲ್ ಪಾಕ್ಸ್ನಲ್ಲಿರುವ ಲಕ್ಷಣಗಳೇ ಮಂಕಿಪಾಕ್ಸ್ನಲ್ಲೂ ಕಾಣಿಸಿಕೊಳ್ಳುತ್ತದೆ. ಆದರೆ ಇದು ಅಷ್ಟೇನೂ ಅಪಾಯಕಾರಿಯಲ್ಲದ ರೋಗವಾದ್ರೂ ಎಚ್ಚರ ವಹಿಸುವುದು ಅತ್ಯವಶ್ಯಕ.
ಲಕ್ಷಣಗಳೇನು?: ಜ್ವರ, ತಲೆ ನೋವು, ಸ್ನಾಯುಗಳ ಸೆಳೆತ, ಬೆನ್ನು ನೋವು, ಬಳಲಿಕೆ, ಚಳಿ, ಮುಖ, ಬಾಯಿ ಸೇರಿದಂತೆ ದೇಹದ ಎಲ್ಲ ಭಾಗಗಳಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ.