ಮಂಕಿ ಪಾಕ್ಸ್‌ಗೆ ಲಸಿಕೆ ಪರಿಣಾಮಕಾರಿ

ಲಂಡನ್,ನ,೨೩- ಸಲಿಂಗಕಾಮಿಗಳಲ್ಲಿ ಕಂಡು ಬರುವ ಮಂಕಿಪಾಕ್ಸ್ ಗೆ ಅಭಿವೃದ್ಧಿ ಪಡಿಸಿರುವ ಲಸಿಕೆ ಶೇಕಡಾ ೭೮ ರಷ್ಟು ಪರಿಣಾಮಕಾರಿಯಾಗಿದೆ ಎಂದು ಇಂಗ್ಲೆಂಡ್‌ನ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ
ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಪುರುಷರು ಈ ಲಸಿಕೆ ತೆಗೆದುಕೊಳ್ಳುವ ಮೂಲಕ ರೋಗ ಬರದಂತೆ ತಡೆಯಲು ಸಹಕಾರಿಯಾಗಲಿದೆ ಎಂದು ಅವರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂಗ್ಲೆಂಡ್‌ನ ಆರೋಗ್ಯ ಭದ್ರತಾ ಏಜೆಸ್ಸಿ ಇತ್ತೀಚೆಗೆ ಮಂಕಿಪಾಕ್ಸ್ ಲಸಿಕೆ ಪಡೆದ ಮಂದಿಯನ್ನು ಅಧ್ಯಯನ ಮಾಡಿತ್ತು.
“ಲಸಿಕೆ ಹಾಕಿದ ನಂತರ ಶೇ. ೭೮ ಪ್ರತಿಶತ ಎರಡು ವಾರ ಅಥವಾ ಅದಕ್ಕಿಂತ ಹೆಚ್ಚಿನ ದಿನಗಳಲ್ಲಿ ಒಂದೇ ಡೋಸ್‌ಗೆ ಲಸಿಕೆ ಪಡೆದರು ಈ ರೋಗದಿಂದ ಗುಣಮುಖರಾಗಿದ್ದಾರೆ ಎನ್ನುವ ಮಾಹಿತಿ ಬಹಿರಂಗ ಮಾಡಿದೆ.
ಮಂಕಿಪಾಕ್ಸ್ ಜಗತ್ತಿನಾದ್ಯಂತ ಹರಡಿರುವ ಮಾರಕ ರೋಗಗಳಲ್ಲಿ ಒಂದಾಗಿದೆ. ಮೈ ಮೇಲೆ ದದ್ದೆಯ ರೀತಿಕಾಣಿಸಿಕೊಳ್ಳಲಿದೆ. ಇದಕ್ಕೆ ಅಭಿವೃದ್ಧಿ ಪಡಿಸಿರುವ ಲಸಿಕೆ ಪಡೆಯುವುದರಿಂದ ರೋಗದಿಂದ ಪಾರಾಗಬಹುದು ಎಂದು ಅಧ್ಯಯನ ಮಾಹಿತಿ ಈ ವಿಷಯ ತಿಳಿಸಿದೆ.
ಡೆನ್ಮಾರ್ಕ್‌ನ ಬವೇರಿಯನ್ ನಾರ್ಡಿಕ್ ಎಂವಿಎ-ಬಿಎ ಸಂಸ್ಥೆ ಮಂಕಿಪಾಕ್ಸ್ ವಿರುದ್ಧ ಲಸಿಕೆ ಅಭಿವೃದ್ಧಿ ಪಡಿಸುವ ಪರವಾನಗಿಯನ್ನು ಹೊಂದಿದೆ. ಕಳೆದ ವಾರ ಯುರೋಪಿಯನ್ ರಾಷ್ಟ್ರಗಳಿಗೆ ಎರಡುದಶಲಕ್ಷ ಡೋಸ್‌ಗಳನ್ನು ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಇಂಗ್ಲೆಂಡ್‌ನಲ್ಲಿ ೫೫,೦೦೦ ಕ್ಕೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಇಂಗ್ಲೆಂಡ್‌ನ ರಾಷ್ಟ್ರೀಯ ಲಸಿಕಾ ಮತ್ತು ತಪಾಸಣಾನಿರ್ದೇಶಕ ಸ್ಟೀವ್ ರಸ್ಸೆಲ್ ಹೇಳಿದ್ದಾರೆ.
“ಲಸಿಕೆ ಎಷ್ಟು ಪರಿಣಾಮಕಾರಿ ಎಂದು ನಮಗೆ ಈಗ ತಿಳಿದಿದೆ, ಕೇವಲ ಒಂದು ಡೋಸ್‌ನಿಂದ ವೈರಸ್ ವಿರುದ್ಧ ಶೇಕಡಾ ೭೮ ರಷ್ಟು ರಕ್ಷಣೆ ನೀಡುತ್ತದೆ. ಹೀಗಾಗಿ ಲಸಿಕೆ ಪಡೆಯಲು ಮುಂದಾಗಿ ಎಂದು ಮನವಿ ಮಾಡಿದ್ದಾರೆ.
ಇಂಗ್ಲೆಂಡ್‌ನಲ್ಲಿ ಜುಲೈ ಮತ್ತು ನವೆಂಬರ್ ನಡುವಿನ ೩೬೩ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದವು.ಹೆಚ್ಚಿನ ಸಂದರ್ಭಗಳಲ್ಲಿ ಸಲಿಂಗಕಾಮಿ ಮತ್ತು ದ್ವಿಲಿಂಗಿ ಪುರುಷರು ಮತ್ತು ಪುರುಷರೊಂದಿಗೆ ಲೈಂಗಿಕತೆಯನ್ನು ಹೊಂದಿರುವ ಇತರರು. ವೈರಸ್‌ಗೆ ತುತ್ತಾದವರಲ್ಲಿ ೩೨೩ ಮಂದಿ ಲಸಿಕೆ ಪಡೆದಿರಲಿಲ್ಲ ಎಂದು ಹೇಳಿದ್ದಾರೆ.