ಭ್ರೂಣ ಹತ್ಯೆ ವಿರುದ್ಧ ಈ ಗುಬ್ಬಿಮರಿ ಹೋರಾಟ

ನಮ್ಮ ದೇಶದಲ್ಲಿ ಹೆಣ್ಣಿಗೆ ವಿಶೇಷ ಪ್ರಾತಿನಿಧ್ಯವಿದೆ. ಪುರಾಣ, ವೇದ, ಉಪನಿಷತ್ತುಗಳಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನವಿದೆ. ಆದರೆ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಹೆಚ್ಚುತ್ತಿವೆ. ಇದರ ಮೇಲೆ ಬೆಳಕು ಚೆಲ್ಲುವ ಗುಬ್ಬಿಮರಿ ಎನ್ನುವ ಚಿತ್ರವೊಂದು ಬೆಳ್ಳಿತೆರೆಗೆ ಬರುತ್ತಿದೆ.

ಮಧು ಡಕಣಾಚಾರ್ ಗುಬ್ಬಿಮರಿ ಚಿತ್ರ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ನಿರ್ದೇಶಕ ಹಾಗೂ ನಿರ್ಮಾಪಕರು ಈ ಚಿತ್ರದ ಟ್ರೇಲರ್  ಬಿಡುಗಡೆ ಮಾಡಿದರು.

ಕೆಲವರಿಗೆ ಹೆಣ್ಣು ತಾಯಿಯಾಗಿ ಬೇಕು, ಹೆಂಡತಿಯಾಗಿ ಬೇಕು ಆದರೆ ಮಗಳಾಗಿ ಮಾತ್ರ ಬೇಡ. ಕಾಲ ಎಷ್ಟು ಮುಂದುವರೆದಿದ್ದರೂ, ಇನ್ನೂ ಕೆಲವು ವಿಕೃತ ಮನಸ್ಸಿನವರು ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದಾರೆ. ಅಂತಹವರಿಗೆ ಈ ಸಿನಿಮಾ ಮೂಲಕ ಇದು ತಪ್ಪು ಎಂದು ಅರಿವು ಮೂಡಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ.

ಎಲ್ಲರೂ ಕುಟುಂಬ ಸಮೇತ ನೋಡಬಹುದಾದ ಚಿತ್ರ ನಮ್ಮದು‌ ಎಂದು ನಿರ್ದೇಶಕ ಮಧು ಡಕಣಾಚಾರ್ ತಿಳಿಸಿದರು.

ಸುಂದರ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ದೀಪು – ಸಿದ್ದು ಛಾಯಾಗ್ರಹಣ, ಎ.ಟಿ.ರವೀಶ್ ಸಂಗೀತ ನಿರ್ದೇಶನ ಹಾಗೂ ಆದಿತ್ಯ ಕುಣಿಗಲ್  ಸಂಕಲನ ಈ ಚಿತ್ರಕ್ಕಿದೆ ಎಂದು ನಿರ್ದೇಶಕ ಮಧು ಡಕಣಾಚಾರ್ ಚಿತ್ರದ ಬಗ್ಗೆ ‌ಮಾಹಿತಿ ನೀಡಿದರು.

ಇದು ಮಕ್ಕಳ ಚಿತ್ರವಲ್ಲ. ಮಕ್ಕಳ ಜೊತೆಗೆ ಹಿರಿಯರು ನೋಡಬೇಕಾದ ಚಿತ್ರ. ನಿರ್ದೇಶಕರು ಒಳ್ಳೆಯ ಚಿತ್ರ ಮಾಡಿದ್ದಾರೆ. ನೋಡಿ ಹಾರೈಸಿ ಎಂದರು ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಸುಂದರ್.
ನಿರ್ಮಾಪಕರಾದ ಆನಂದಬಾಬು ಹಾಗೂ ಡಾ.ನಿಶ್ಚಿತ ಚಿತ್ರದ ಕುರಿತು ಮಾತನಾಡಿದರು.

ಚಿತ್ರದಲ್ಲಿ ಅಭಿನಯಿಸಿರುವ ಮಾಸ್ಟರ್ ಚಿನ್ಮಯ್, ಮಾಸ್ಟರ್ ಸಂಜಯ್, ಸಿಂಧು, ಕಾಮಿಡಿ ಕಿಲಾಡಿಗಳು ಸಂತು, ಕಾಮಿಡಿ ಕಿಲಾಡಿಗಳು ಚಂದ್ರು, ಆಶಾ, ಮಂಗಳಮುಖಿ ಪ್ರಿಯಾಂಕ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.