ಭ್ರಷ್ಟ ಸರಕಾರದ ವಿರುದ್ಧ ಜನಾಕ್ರೋಶ;ಕಾಂಗ್ರೆಸ್ ಗೆಲುವಿನ ಭರವಸೆ

ಬಿಜೆಪಿ ಅನೈತಿಕ ರಾಜಕೀಯ ಪರಿಣಾಮ ಮಸ್ಕಿ ಉಪ ಚುನಾವಣೆ
ರಾಯಚೂರು ಏ ೪:- ಬಿಜೆಪಿ ಪಕ್ಷದ ಅನೈತಿಕ ವ್ಯವಹಾರದಿಂದ ರಾಜ್ಯದಲ್ಲಿ ಇಂದು ಉಪ ಚುನಾವಣೆ ನಡೆಯುವಂತಾಗಿದ್ದು, ಬುದ್ಧಿವಂತ ಮತದಾರರು ಬಿಜೆಪಿ ವಿರುದ್ಧ ಮತ ಚಲಾಯಿಸಿ, ಅನೈತಿಕ ರಾಜಕೀಯಕ್ಕೆ ಅಂತ್ಯ ಹಾಡುವ ಅಗತ್ಯವಿದೆ ಎಂದು ಕಾಂಗ್ರೆಸ್ ಪಕ್ಷ ಮಾಜಿ ಮಂತ್ರಿ ಹಾಗೂ ಹಿರಿಯ ಮುಖಂಡರಾದ ಬಸವರಾಜ ರಾಯರೆಡ್ಡಿ ಅವರು ಹೇಳಿದರು.
ಅವರಿಂದು ಜಿಲ್ಲಾ ಕಾಂಗ್ರೆಸ್ ಪಕ್ಷ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಮಸ್ಕಿ ಕ್ಷೇತ್ರದ ಉಪ ಚುನಾವಣೆ ಅಪರೇಷನ್ ಕಮಲದ ಅನೈತಿಕ ಚಟುವಟಿಕೆ ಹಿನ್ನೆಲೆಯಲ್ಲಿ ಜನರು ಎದುರಿಸುವಂತಾಗಿದೆ. ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ಸಮ್ಮಿಶ್ರ ಸರಕಾರ ಪತನಗೊಳಿಸುವ ಉದ್ದೇಶದಿಂದ ೧೭ ಜನ ಶಾಸಕರು ರಾಜೀನಾಮೆ ನೀಡಿದ ಕಾರಣಕ್ಕೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈಗಾಗಲೆ ೧೬ ಕ್ಷೇತ್ರಗಳ ಉಪ ಚುನಾವಣೆ ಮುಗಿದ್ದಿದ್ದು ಈಗ ಮಸ್ಕಿ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಜಾ.ದಳ ಪಕ್ಷಗಳ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕುಲಗೆಟ್ಟರು ಸುಖ ಪಡಬೇಕು ಎನ್ನವು ಗಾದೆ ಎಂತೆ ಈ ರಾಜೀನಾಮೆ ನೀಡಿದ ಶಾಸಕರು ತಾವು ವಯಕ್ತಿಕವಾಗಿ ಲಾಭ ಪಡೆದುಕೊಂಡಿದ್ದಾರೆ, ಆದರೆ ಕ್ಷೇತ್ರದ ಜನರಗೆ ಇದರಿಂದ ಯಾವ ಲಾಭವಾಗಿದೆ. ಎಂದು ಅವರು ಪ್ರಶ್ನಿಸಿದರು. ಈ ಕಾರಣಕ್ಕೆ ಪ್ರತಾಪಗೌಡ ಪಾಟೀಲ್ ಅವರ ವಿರುದ್ಧ ಜನ ಮತ ಚಲಾವಣೆ ಮಾಡಿ ಅನೈತಿಕ ರಾಜಕೀಯಕ್ಕೆ ಪಾಠ ಕಲಿಸುವ ಅಗತ್ಯವಿದೆ.ದೇಶ ಭಕ್ತಿ ಮತ್ತು ನೈತಿಕತೆ ಬಗ್ಗೆ ಮಾತ ನಾಡುವ ಪ್ರಧಾನಿ ಮೋದಿ ಹಾಗೂ ಅಮಿತ ಶಾ ಅವರು ಈ ಅನೈತಿಕ ಸರಕಾರ ರಚನೆ ಏಕೆ ತಡೆಯಲಿಲ್ಲ ಎಂದು ಪ್ರಶ್ನಿಸಿದ ಅವರು,ಬಿಜೆಪಿ ಸರಕಾರ ಎಂದರೆ ಕೇವಲ ಭ್ರಷ್ಟಾಚಾರ ಎನ್ನುವುದು ರಾಜ್ಯದಲ್ಲಿ ಸ್ಪಷ್ಟಗೊಂಡಿದೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಿಕ್ಕೆ ಬಂದ ನಂತರ ಎರಡು ಬಜೆಟ್ ಮಂಡಿಸಲಾಗಿದೆ. ಮೊದಲ ಬಜೆಟ್ ಸಮಯಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ೫೩ ಸಾವಿರ ಕೋಟಿ ಸಾಲ ಮಾಡಿದ್ದಾರೆ, ಎರಡನೇ ಬಜೆಟ್ ಮಂಡನೆ ವೇಳೆಯಲ್ಲಿ ೭೨ ಸಾವಿರ ಕೋಟಿ ಸಾಲ ಮಾಡಲಾಗಿದೆ. ಎರಡು ವರ್ಷದಲ್ಲಿ ಒಟ್ಟು ೧೩೦ ಲಕ್ಷ ರೂ ಸಾಲ ಆಡಿದ ಬಿಜೆಪಿ ಸಾಲ ಪಡೆಯಲು ಇರುವ ಫಿಸ್ಕಲ್ ರೆಸ್ಪಾನ್ಸಿಬಲಿಟಿ ಕಾಯ್ದೆಯನ್ನೆ ಉಲ್ಲಂಘಿಸಿದೆ ಎಂದು ಆರೋಪಿಸಿದರು.
ಕಳೆದ ಸಲ ಯಡಿಯೂರಪ್ಪ ಅವರು ೨.೪೬ ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ.. ರಾಜ್ಯದ ಹತ್ತು ವರ್ಷದ ಇತಿಹಾದಲ್ಲಿ ಈ ಹಿಂದೆ ಕೊರತೆ ಬಜೆಟ್ ಮಂಡಿಸಿರಲಿಲ್ಲ. ಆದರೆ ಈ ಸಲ ಕೊರತೆ ಬಜೆಟ್ ಮಂಡಿಸಲಾಗಿದೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಜನರ ಕಲ್ಯಾಣಕ್ಕಿಂದ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ. ಅಭಿವೃದ್ಧಿ ಕಾಮಗಾರಿಗೆ ಹಣ ನೀಡಬೇಕು. ಬಿಲ್ ಪಡೆಯಲು ಹಣ ನೀಡಬೇಕು. ಮಂತ್ರಿಗಳಿಗೆ ತಿಳಿಯದಂತೆ ಮುಖ್ಯಮಂತ್ರಿಗಳು ನೇರವಾಗಿ ಹಣ ವರ್ಗಾವಣೆ ಮಾಡುವಂತ ವ್ಯವಸ್ಥೆ ಈ ಸರಕಾರದಲ್ಲಿದೆ.
ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರು ಮುಖ್ಯಮಂತ್ರಿಗಳ ಹಸ್ತಕ್ಷೇಪದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಪ್ರಕರಣ ಈ ಸರಕಾರದ ಅರಾಜಕತೆಗೆ ಸಾಕ್ಷಿಯಾಗಿದೆ. ಇದರಲ್ಲಿ ಈಶ್ವರಪ್ಪ ಅವರು ಒಂದು ತಪ್ಪು ಮಾಡಿದ್ದಾರೆ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು.ಇಲ್ಲವೇ ನೈತಿಕ ಹೊಣೆ ಒತ್ತು ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ರಾಜ್ಯ ಬಿಜೆಪಿ ಸರಕಾರದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಯಾವುದೆ ಬೆಲೆ ಇಲ್ಲದಂತಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಿಳಿಗೆ ಈ ಸಲ ೧೫೦೦ ಕೋಟಿ ಮಾತ್ರ ನೀಡಿದ್ದಾರೆ. ವಾಸ್ತವವಾಗಿ ೩೦೦೦ ಕೋಟಿ ರೂ ನೀಡಬೇಕಿತ್ತು ಎಂದು ಪ್ರತಿಪಾಧಿಸಿದರು, ತಾವು ರಾಜ್ಯದ ಉನ್ನತ ಶಿಕ್ಷಣ ಮಂತ್ರಿಯಾಗಿದ್ದ ಅವಧಿಯಲ್ಲಿ ಜಿಲ್ಲೆ ಪತ್ಯೇಕ ವಿಶ್ವ ವಿದ್ಯಾಲಯ ಮಂಜೂರು ಮಾಡಲಾಗಿದೆ.
ಆದರೆ ಈ ಬಜೆಟ್‌ನಲ್ಲಿ ರಾಜ್ಯ ಸರಕಾರ ಕನಿಷ್ಟ ೫೦ ಕೋಟಿ ರೂ ಅನುದಾನ ನೀಡದಿರುವುದು ಖಂಡನೀಯವಾಗಿದೆ. ಹಣಕಾಸಿನ ವ್ಯವಸ್ಥೆ ಇಲ್ಲದೆ ಈ ವಿಶ್ವ ವಿದ್ಯಾಲಯ ಯಾವ ರೀತಿ ನಿರ್ವಹಿಸಬೇಕು ಎಂದು ಅವರು ಪ್ರಶ್ನಿಸಿದರು. ಮಸ್ಕಿ ಕ್ಷೇತ್ರದಲ್ಲಿ ಜಾ.ದಳ ಪಕ್ಷ ಸ್ಪರ್ಧಿಸದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಜಾ,ದಳ ಪಕ್ಷವು ಮತ್ತೊಂದು ವ್ಯವಹಾರಿಕ ಪಕ್ಷವಾಗಿದೆ ಎಂದರು. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ ಕಟೀಲ್ ಅವರಿಗೆ ಮಾತನಾಡುವ ಸಂಸ್ಕಾರವೇ ಇಲ್ಲ. ಇವರಿಗೆ ಯಾರ ಬಗ್ಗೆ ಯಾವ ರೀತಿ ಮಾತನಾಡಬೇಕು ಎನ್ನುವ ಅರಿವಿಲ್ಲ. ಇಂಥವರ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಎನ್ ಎಸ್ ಬೋಸರಾಜು, ಪಾರಸ್ ಮಾಲ್ ಸುಖಾಣಿ,ಜಯಣ್ಣ, ಬಸವರಾಜ ರೆಡ್ಡಿ, ಶಿವಮೂರ್ತಿ.ಶಾಂತಪ್ಪ, ತಾಯಣ್ಣ ನಾಯಕ, ರುದ್ರಪ್ಪ ಅಂಗಡಿ, ಅಬ್ದುಲ್ ಖರೀಂ, ಅಮರೇಗೌಡ,ಅಂಜಿನಯ್ಯ ಕುರುಬದೊಡ್ಡಿ ಇನ್ನಿತರರು ಉಪಸ್ಥಿತರಿದ್ದರು.