ಭ್ರಷ್ಟ ರಕ್ಷಕ ಬಿಜೆಪಿ ಸರ್ಕಾರಕ್ಕೆ ಚಾಟಿಯೇಟು: ಹೆಗಡೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.17: ಭ್ರಷ್ಟ ರಕ್ಷಕ ಬಿಜೆಪಿ ಸರ್ಕಾರಕ್ಕೆ ಜನತೆ ಚಾಟಿಯೇಟು ಬೀಸಿದಾಗ ಎಚ್ಚೆತ್ತುಕೊಳ್ಳುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ  ವೆಂಕಟೇಶ್ ಹೆಗಡೆ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು. ರಾಜ್ಯದ ಬಿಜೆಪಿಯ ಭ್ರಷ್ಟ ಸರ್ಕಾರವು ತಜ್ಞರ ಸಲಹೆ ಪಡೆಯದೇ ಮನಸಿಗೆ ತೋಚಿದಂತೆ ಆದೇಶ ಮಾಡುವುದು, ಸಾರ್ವಜನಿಕರಿಂದ ಇದಕ್ಕೆ ವಿರೋಧ ವ್ಯಕ್ತ ಆಗುತ್ತಿದ್ದಂತೆ ಅದನ್ನು ಹಿಂದಕ್ಕೆ ಪಡೆಯುವುದು ಬಿಜೆಪಿಯ  ಸರ್ಕಾರಕ್ಕೆ ಅಭ್ಯಾಸವಾಗಿದೆ. ಇದಕ್ಕೆ ಹೊಸ ಸೇರ್ಪಡೆ ‘ಸರ್ಕಾರಿ ಕಚೇರಿಗಳಲ್ಲಿ ಕ್ಯಾಮೆರಾ ಚಿತ್ರೀಕರಣ ನಿಷೇಧಿಸಿ ಹೊರಡಿಸಿದ್ದ ಆದೇಶ’. ರಾತ್ರೋರಾತ್ರಿ ಯೂಟರ್ನ್ ಹೊಡೆಯುವಂತೆ ಭ್ರಷ್ಟ ರಕ್ಷಕ ಬಿಜೆಪಿ ಸರ್ಕಾರಕ್ಕೆ ಚಾಟಿಯೇಟು ಬಿದ್ದು ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದಿದೆ ಎಂದು ಟೀಕಿಸಿದ್ದಾರೆ.‌
ಭ್ರಷ್ಟ ಬಿಜೆಪಿ ಸರ್ಕಾರ ಬುದ್ದಿ ಕಲಿಯಲು ಸಾರ್ವಜನಿಕ ಟೀಕೆ, ವಿಪಕ್ಷಗಳ ವಿರೋಧಗಳೇ ಬರಬೇಕೆ? ಇಂತಹ ವಿಚಾರದಲ್ಲಿ ಸಾಮಾನ್ಯ ತಿಳುವಳಿಕೆಯೂ ಇಲ್ಲದಿದ್ದರೆ ಹೇಗೆ?
ರಾಜ್ಯ ಬಿಜೆಪಿ ಸರ್ಕಾರ ‘ಮದ್ಯ’ ರಾತ್ರಿ’ ಕೆಲಸಗಳನ್ನು ನಿಲ್ಲಿಸಬೇಕು ಹಾಗೂ ಹಿಂದಿ ಭಾಷೆ ಮೇಲಿನ ಪ್ರೇಮದ ಉತ್ತುಂಗದಲ್ಲಿ ಕನ್ನಡ ಭಾಷೆಯ ಕೊಲೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.