ಭ್ರಷ್ಟ ಬಿಜೆಪಿ ತೊಲಗಿಸಿ – ಜನ ಸೇವೆ ಮಾಡಲು ಅವಕಾಶ ಕೊಡಿ

ಔರಾದ್ :ಎ.20: ಮೀಸಲು ಕ್ಷೇತ್ರ ಔರಾದ್ ತಾಲೂಕಿನಲ್ಲಿ ಭ್ರಷ್ಟ ಬಿಜೆಪಿಯನ್ನು ತೊಲಗಿಸಿ ಜನ ಸೇವೆ ಮಾಡಲು ನನಗೊಂದು ಅವಕಾಶ ನೀಡಿ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಭೀಮಸೇನ್‍ರಾವ ಶಿಂಧೆ ಮನವಿ ಮಾಡಿದರು. ಅವರು ಬುಧವಾರ ನಾಮಪತ್ರ ಸಲ್ಲಿsಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಶೇ. 40 ಕಮಿಷನ್ ಬಿಜೆಪಿ ಸರಕಾರವಿದ್ದರೆ, ಔರಾದ್ ತಾಲೂಕಿನಲ್ಲಿ ಶೇ. 60ರಷ್ಟು ಕಮಿಷನ್ ಆಡಳಿತವಿದ್ದು, ಜನರು ಬೇಸತ್ತು ಹೋಗಿದ್ದಾರೆ. ಇಂತಹ ಭ್ರಷ್ಟ ಬಿಜೆಪಿ ಪಕ್ಷವನ್ನು ತಿರಸ್ಕರಿಸಿ, ಅನುಕಂಪದ ಅಲೆಗೆ ಮಾರು ಹೋಗದೆ ಕಾಂಗ್ರೆಸ್‍ಗೆ ಬೆಂಬಲಿಸಬೇಕು ಅಂದಾಗ ಮಾತ್ರ 3 ಅವಧಿ ಶಾಸಕನಾಗಿ ಅಭಿವೃದ್ಧಿ ಮಾಡದ ಪ್ರಭು ಚವ್ಹಾಣಗೆ ಪಾಠ ಕಲಿಸಿದಂತಾಗುತ್ತದೆ ಎಂದರು.
ನಾಮಪತ್ರ ಸಲ್ಲಿಸಲು ಕ್ಷೇತ್ರ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದು, ಕನಿಷ್ಟವೆಂದರೂ 25-30 ಸಾವಿರದ ಅಂತರದಿಂದ ನಾನು ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ರೈತರು ಸಮಸ್ಯೆಯಲ್ಲಿದ್ದಾರೆ. ಅವರ ಅಭಿವೃದ್ಧಿಗೆ ಪೂರಕವಾಗಿ ನೀರಾವರಿ ಯೋಜನೆಗಳು ತರಲಾಗುತ್ತದೆ. ಇನ್ನೂ ಶಿಕ್ಷಣ ಅಭಿವೃದ್ಧಿ ಪಡೆಬೇಕಿದೆ. ಈಗಾಗಲೇ ಕ್ಷೇತ್ರದ ಸಮಸ್ಯೆಗಳು ಅರಿತ ನಾನು ಎಲ್ಲವೂ ಒಂದೊಂದಾಗಿ ಬಗೆಹರಿಸುವ ಯೋಜನೆಗಳು ಹಾಕಿಕೊಂಡಿದ್ದೇನೆ ಎಂದರು.
ಎಂಎಲ್ಸಿ ಅರವಿಂದಕುಮಾರ ಅರಳಿ, ಬಸವಕಲ್ಯಾಣದ ಕಾಂಗ್ರೆಸ್ ಅಭ್ಯರ್ಥಿ ವಿಜಯಸಿಂಗ್, ಅರುಣಕುಮಾರ ಪಾಟೀಲ್, ರಮೇಶ ದೇವಕತ್ತೆ, ಡಾ. ರತಿಕಾಂತ ಮಜಿಗೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಆನಂದ ಚವ್ಹಾಣ, ರಾಮಣ್ಣ ವಡಿಯಾರ್, ಅಮರ ಜಾಧವ್, ಬಸವರಾಜ ದೇಶಮುಖ, ಸಿದಾರ್ಥ ರಾಠೋಡ್, ಗೀತಾ ಪಂಡಿತ ಚಿದ್ರಿ, ರಾಜಶ್ರೀ ಸ್ವಾಮಿ, ಕೆಟಿ ವಿಶ್ವನಾಥ್, ವೆಂಕಟ ಶಿಂಧೆ, ಪ್ರೇಮಾ ಡೋಣಗಾಂವ, ಧನಾಜಿ ಜಾಧವ್, ಸುಧಾಕಾರ್ ಕೊಳ್ಳುರ್, ಶಿವರಾಜ ದೇಶಮುಖ, ಬಂಟಿ ದರಬಾರೆ, ಪ್ರಕಾಶ ಪಾಟೀಲ್, ನೇಹರು ಪಾಟೀಲ್, ತಾಪಂ, ಜಿಪಂ ಮಾಜಿ ಸದಸ್ಯರು, ಪಪಂ ಸದಸ್ಯರು ಪಾಲ್ಗೊಂಡಿದರು.