ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಕರವೇ ಆಗ್ರಹ

ಔರಾದ:ಜ.9: ಪಟ್ಟಣದ ತಹಸಿಲ್ದಾರ್ ಕಛೇರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಅನಿಲ್ ಹೆಡೆ ಅವರ ನೇತೃತ್ವದಲ್ಲಿ ತಾಲೂಕು ಉಪ ನೊಂದಣಿ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕೆಂದು ಜಿಲ್ಲಾ ನೊಂದಾಣಿಧಿಕಾರಿಗಳಿಗೆ ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು.

ಮನವಿ ಪತ್ರ ಸಲ್ಲಿಸಿದ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ವಕ್ತಾರ ಹಣಮಂತ ದೇಶಮುಖ ಅವರು ಮಾತನಾಡಿ ಔರಾದ ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿದೆ. ಉಪ ನೊಂದಣಿ ಅಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು , ಕೂಲಿ ಕಾರ್ಮಿಕರ ಮತ್ತು ರೈತರ ಕೆಲಸಗಳು ಲಂಚ ಇಲ್ಲದೆ ಯಾವುದೇ ಸರ್ಕಾರಿ ಕೆಲಸಗಳು ಆಗುತ್ತಿಲ್ಲ,ನಿಯತ್ತಿನಿಂದ ಕೆಲಸ ಮಾಡಬೇಕು ಇಲ್ಲ ಕುರ್ಚಿ ಖಾಲಿ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

ಕೂಡಲೇ ಉಪ ನೊಂದಣಿ ಅಧಿಕಾರಿ ಅನ್ನ ವರ್ಗಾವಣೆಗೊಳಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಕರವೇ ಮುಖಂಡರು ತಿಳಿಸಿದರು

ಈ ಸಂದರ್ಭದಲ್ಲಿ ಕರವೇ ಪ್ರಮುಖರಾದ ಮಹೇಶ್ ಸ್ವಾಮಿ, ವಿವೇಕ್ ನಿರ್ಮಳೆ, ಅಮಿತ್ ಶಿವಪೂಜೆ , ಬಾಲಾಜಿ ದಾಮಾ, ಚಂದು ಡಿಕೆ, ಶಿವು ದೇಶಮುಖ, ಇರ್ಷಾದ, ಸಂತೋಷ ಚವ್ಹಾಣ, ಹರೀಶ್ ,ಸತೀಶ ಫುಲಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು